Nimminda

ತಾಪಮಾನ ಏರಿಕೆಗೆ ಅರಣ್ಯನಾಶ ಕಾರಣ
ಭೌಗೋಳಿಕ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹಿಂದೆಂ ದೂ ಕಂಡರಿಯದ ಸುಡು ಬಿಸಿಲ ಬೇಗೆ ನಗರದ ಜನರನ್ನು ಹೈರಾಣಾಗಿಸುತ್ತಿದೆ. ಅರಣ್ಯ ನಾಶವೇ ಇದಕ್ಕೆ ಮುಖ್ಯ ಕಾರಣ. ಪುರಾತನ ತಲೆಮಾರುಗಳಿಂದ ಬೆಳೆದು ನಿಂತಿದ್ದ ಭಾರೀ ಗಾತ್ರದ ಮರಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಡಿದುರುಳಿಸುತ್ತಿದ್ದಾನೆ. ಇದು ಒಂದೆಡೆ ಭೌಗೋಳಿಕ ತಾಪಮಾನ ಏರಿಕೆಗೆ ಕಾರಣವಾದರೆ, ಇನ್ನೊಂದೆಡೆ ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಮತೋಲನವನ್ನು ತಪ್ಪಿಸುತ್ತದೆ. ಅರಣ್ಯನಾಶ ವಿಪರೀತವಾದಂತೆ ಸ್ವಚ್ಛ ಗಾಳಿ, ಶುದ್ಧ ಪರಿಸರ ಯಾವುದೂ ಸಿಗದೆ ಮಾನವ ಬಿಸಿಲಿನಲ್ಲಿ ಒಣಗಿ ಸಾಯುವಂತಾಗುತ್ತದೆ. ಹಿಂದೆ ಇದ್ದ ಬೃಹತ್ ಪ್ರಮಾಣದ ಕಾಡುಗಳು ಈಗ ನೋಡುವುದಕ್ಕೂ ಸಿಗುವುದಿಲ್ಲ. ಎಲ್ಲಿ ನೋಡಿದರೂ ಅರಣ್ಯವನ್ನು ನಾಶ ಮಾಡಿ ಕಟ್ಟಡ ನಿರ್ಮಿಸುವುದನ್ನು ಕಾಣುತ್ತೇವೆ. ಅಲ್ಲದೇ ಅಭಿವೃದ್ದಿಯ ಹೆಸರಿನಲ್ಲಿ ಮರಗಳಿಗೆ ಕೊಡಲಿ ಏಟು ಬೀಳುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮನುಕುಲದ ನಾಶಕ್ಕೂ ಇದೇ ಕಾರಣವಾಗಲಿರುವುದಂತೂ ಸುಳ್ಳಲ್ಲ.
ಪ್ರಕಾಶ್ ಪಿ, ನೀರ್‌ಮಾರ್ಗ

Be the first to start a conversation

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: