Lekhana

ಇಂದು ಮತ್ತೆ ನೆನಪಾಗುತ್ತಿದ್ದಿಯಾ 
ಅಂದು ಮೊದಲ ಬಾರಿಗೆ ನಿನ್ನ ಕಂಡಾಗ ನೀನು ತಿಳಿಯ ಹಸಿರು ಬಣ್ಣದ ಬಟ್ಟೆ ಧರಿಸಿದ್ದೆ, ಕೈಯಲ್ಲಿ ಫೀಟುದ್ದದ ಬುಕ್ಕೆಗಳು ಸುಮ್ಮನೆ ನೀನು ನಡೆದು ಬರುತ್ತಿದ್ದರೆ. ಜಗತ್ತಿನ ಒಂಭತ್ತನೇ ಅದ್ಭುತವೊಂದನ್ನು ಕಾಣುತ್ತಿದ್ದೇನೋ ಎಂಬಂತೆ ನಾನು ನಿಂತಲ್ಲೇ ಕಲ್ಲಾಗಿ ಹೋಗಿದ್ದೆ. ನನ್ನನ್ನು ಕಂಡ ನಿನ್ನ ಕೈಯಲ್ಲಿ ಅದಾಗಲೇ ಸಣ್ಣ ನಡುಕ, ಕಣ್ಣಂಚಿನಲ್ಲಿ ಕಂಡೂ ಕಾಣದಂತಹ ಹೂನಗೆ.
 
ಹಾಯ್ ಜೂಹಿ,
ನಿಂಗೆ ನಾನು ನೆನಪಾಗ್ತೀನಾ? ಹಾಗಂತ ಬಹಳ ಎಕ್ಸೈಟ್ ಆಗಿ ಅದೊಂದು ದಿನ ನೀನು ಕೇಳಿದ್ದೆ.
ಉತ್ತರ ಇಂದು ಹೇಳುತ್ತಿದ್ದೇನೆ ಕೇಳು. ಹೌದು ನನಗೆ ನೀನು ತುಂಬಾನೆ ನೆನಪಾಗ್ತಿದ್ದಿಯಾ. ಆದರೆ ಹುಡುಗೀ ನಿಜಕ್ಕೂ ನನಗೆ ನೆನಪಾಗುತ್ತಿರುವುದು ನೀನಾ? ನಿನ್ನ ಹೆಸರಾ? ನಿನ್ನ ಮುಖವಾ? ಕಣ್ಣುಗಳಾ? ಇಲ್ಲ, ಅದರೊಳಗೆ ಕಂಡು ಕಾಣ ದಂತಿರುವ ನೋವುಗಳಾ? ಗೊತ್ತಾಗುತ್ತಿಲ್ಲ.
ನಿನ್ನ ನೆನಪೆಂಬುದನ್ನು ಈ ದೇಹದಿಂದ ಕಿತ್ತು ಬಿಡಬೇಕು. ಹೃದಯದ ತುಂಬ ಓಡಾಡಿದ ನಿನ್ನ ಹೆಜ್ಜೆ ಗುರುತುಗಳು ಇನ್ನೂ ಕಾಡುತ್ತಿರುವ ಪಿಸುಮಾತುಗಳು, ರಗಳೆಗಳು, ಮನಿಸು, ಮುದ್ದು… ಇವೆಲ್ಲವನ್ನು ಶಾಶ್ವತವಾಗಿ ಅಳಿಸಿಬಿಡಬೇಕು. ಇಷಕ್ಕೂ ನನ್ನದು, ನಿನ್ನದು ಭೇಟಿಯಾಗಿಲ್ಲವೇನೂ ಎಂಬಂತೆ ಬದುಕಿ ಬಿಡಬೇಕು.
ಹಾಗಂತ ಅಂದುಕೊಳ್ಳುತ್ತೇನೆ. ಆದರದು ಸಾಧ್ಯವೇ?
ಅಂದು ಮೊದಲ ಬಾರಿಗೆ ನಿನ್ನ ಕಂಡಾಗ ನೀನು ತಿಳಿಯ ಹಸಿರು ಬಣ್ಣದ ಬಟ್ಟೆ ಧರಿಸಿದ್ದೆ, ಕೈಯಲ್ಲಿ ಫೀಟುದ್ದದ ಬುಕ್ಕೆಗಳು ಸುಮ್ಮನೆ ನೀನು ನಡೆದು ಬರುತ್ತಿದ್ದರೆ ಜಗತ್ತಿನ ಒಂಭತ್ತನೇ ಅದ್ಭುತವೊಂದನ್ನು ಕಾಣುತ್ತಿದ್ದೇನೋ ಎಂಬಂತೆ ನಾನು ನಿಂತಲ್ಲೇ ಕಲ್ಲಾಗಿ ಹೋಗಿದ್ದೆ. ನನ್ನನ್ನು ಕಂಡ ನಿನ್ನ ಕೈಯಲ್ಲಿ ಅದಾಗಲೇ ಸಣ್ಣ ನಡುಕ, ಕಣ್ಣಂಚಿನಲ್ಲಿ ಕಂಡೂ ಕಾಣದಂತಹ ಹೂನಗೆ.
ಅಂದು ನನಗೆ ನಾನೇ ಕೇಳಿಕೊಂಡಿದ್ದೆ. ಇದನ್ನೇ ಅಲ್ಲವೇ ಜಗತ್ತು ಪ್ರೀತಿ ಎಂದು ಕರೆಯುವುದು? ನಿನ್ನ ಮೊದಲ ಸಲ ಮಾತನಾಡಿಸಿದಾಗ ಹೊಸ ಹುಡುಗಿಯೊಂದಿಗೆ ಮಾತಾ ಡುತ್ತಿದ್ದೇನೆ ಎಂಬ ಭಾವನೆಯೂ ಉಕ್ಕೇರಿಲ್ಲ. ನಿನ್ನ ನಗು, ಮಾತು ಆತ್ಮೀಯ ಎನ್ನಿಸಿದ್ದವು. ಆದರೆ ಈ ಸಂಬಂಧ ಕ್ಕೊಂದು ಕೊನೆಯಿದೆ ಎಂಬುದನ್ನು ಆ ಕ್ಷಣಕ್ಕೆ ಮಾತು ಅರಿವಿಗೆ ಬರಲಿಲ್ಲ. ಮೊದ ಮೊದಲ ಜಗಳಗಳಲ್ಲಿ ಒಂದು ಬಗೆಯ ಹಿತವಾದ ಖುಷಿಯಿತ್ತು. ಜಗಳ ಮುಗಿಯಿತು ಎಂಬುದಕ್ಕೆ ಸೂಚನೆಯಾಗಿ ಬೈಟೂ ಜ್ಯೂಸ್‌ಗಳಿತ್ತು. ಹತ್ತಾರು ಜನ್ಮಗಳಿಗೂ ಮುಗಿಯದಷ್ಟು ಮಾತು ಗಳಿತ್ತು. ಹಿತವಾದ ಮೌನಗಳಿತ್ತು. ಆದರೆ ಬರಿಯ ಜಗಳಗಳಷ್ಟೇ ನಮ್ಮನ್ನು ಪ್ರೀತಿಗಿಂತ ಹೆಚ್ಚಾಗಿ ಆವರಿಸಿ ಕೊಂಡತ್ತೇ?
ದುರಂತ ನೋಡು. ಬದುಕು ಹಳಿ ತಪ್ಪುತ್ತಿದೆ ಎಂಬ ಯೋಚನೆ ಆಗಲೂ ನಮಗೆ ಸಿಕ್ಕಲೇ ಇಲ್ಲ.
ಆದರೆ ಹುಡುಗಿ ನಾನು ಯಾವತ್ತು ಜಿದ್ದಿಗೆ ಬೀಳದೆ ಸೋಲಪ್ಪಿ ಕೊಳ್ಳದವ. ಅಂದು ನೀನು ಎದ್ದು ಹೋಗುವಾಗ ಮಾತನಾಡಿದೆ. ನಾನು ಊಹುಂ ಅಂತ ಕೂಡ ಹೇಳಲಿಲ್ಲ. ತಪ್ಪು ನಿನ್ನದೂ ಇದೆ. ನನ್ನದೂ ಇದೆ. ಕೈಬೀಸಿ ಕರೆಯುತ್ತಿರುವ ಭವ್ಯ ಭವಿಷ್ಯಕ್ಕೆ ಬದುಕು ನಿನ್ನ ಕರೆದೊ ಯ್ಯುತ್ತಿದ್ದರೆ ಬೇಡವೆಂದು ಹೇಗೆ ತಾನೇ ಹೇಳಲಿ ಹೇಳು. ಮನದಲ್ಲಿ ಅಂದು ಕೂಡಾ ಹುಡುಗಿಗೆ ಒಳ್ಳೆಯದಾಗಲಿ ಎಂಬ ಹಾರೈಕೆಯಿತ್ತು ಇಂದಿನಂತೆ!
ಈಗ ಎಲ್ಲಾ ದುಗುಡಗಳ ನಡುವೆ ಇಂದು ಮತ್ತೆ ನೆನಪಾಗು ತ್ತಿದ್ದಿಯಾ. ನೀನು ನಿಜಕ್ಕೂ ಬದುಕಿನಿಂದ ಎದ್ದು ಹೋಗಿಬಿಟ್ಟೆಯಾ? ಕೇಳಿಕೊಳ್ಳುತ್ತಿದ್ದೇನೆ. ಇಷ್ಟಕ್ಕೂ ಅವಳು ಸಿಕ್ಕಿದ್ದಾದರೂ ಯಾವಾಗ? ಎಂದು ಮನಸ್ಸು ಗೊಳ್ಳನೆ ನಕ್ಕುಬಿಡುತ್ತದೆ. ಬದುಕಿನಲ್ಲಿ ಆಗಾಗ ಬಂದು ಹೋಗುವ ವವಿಧ ಪಾತ್ರಗಳಲ್ಲಿ ನೀನೂ ಒಂದು, ಅದೂ ಈಗಷ್ಟೇ ಅರಿವಾಗಿದೆ. ನೀನು ಬಂದಿದ್ದೆ ಎಂದಾಗ ಈಗ ಸಂಭ್ರಮವೂ ಆಗುತ್ತಿಲ್ಲ. ಎದ್ದು ಹೋದೆ ಎಂಬ ಬಗ್ಗೆ ದುಃಖವೂ ಆಗುತ್ತಿಲ್ಲ. ಈಗ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದೇನೆ. ಯಾಕೆಂದರೆ ಒಂಟಿತನ ಕ್ಕಿಂತ ಬೇಗನೆ ರೂಢಿಯಾಗುವ ಸಂಗತಿ ಜಗತ್ತಿನಲ್ಲಿ ಬೇರಾವುದೂ ಇಲ್ಲವಂತೆ.
ಆದರೂ ನೆನಪುಗಳ ಮೆರವಣಿಗೆಗೆ ಕೊನೆಯೆ ಲ್ಲಿಯದು? ಇರಲಿ, ಇವೆಲ್ಲವುಗಳ ಮುಂದೆ ಅವಗಳನ್ನು ಜೊತೆಯ ಲ್ಲಿಟ್ಟುಕೊಂಡು ನಗು ವುದು ಕೂಡಾ ಅಭ್ಯಾಸ ಮಾಡಿ ಕೊಳ್ಳುತ್ತೇನೆ.
ಇಂತಿ ನಿನ್ನ ನೆನಪಿನ ಹುಡುಗ
ಎ.ಕೆ.

Be the first to start a conversation

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: