೧೮ ಎಸ್ಸೆಸ್ಸೆಫ್ ಕಾರ್ಯಕರ್ತರ ವಿರುದ್ಧ ಎಫ್ಐಆ ರ್ ದಾಖಲು

Posted on May 31, 2011

0


ವಿಟ್ಲ: ಆದಿತ್ಯವಾರ ಕನ್ಯಾನ ಜಂಕ್ಷನ್‌ನಲ್ಲಿ ನಡೆದ ಸಮಸ್ತ ಸುನ್ನೀ ಸಮ್ಮೇಳನದ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಇಕೆ ಕಾರ್ಯಕರ್ತರಿಗೆ ಎಪಿ ಪಂಗಡದ ಕಾರ್ಯ ಕರ್ತರು ಸೋಡಾ ಬಾಟ್ಲಿಯಿಂದ ಹಲ್ಲೆ ನಡೆಸಿದ್ದು, ಪ್ರಕರ ಣಕ್ಕೆ ಸಂಬಂಧಿಸಿದಂತೆ ಒಟ್ಟು ೧೮ ಮಂದಿ ಎಸ್ಸೆಸ್ಸೆಫ್ ಕಾರ್ಯಕರ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ಎಫ್.ಐ.ಅರ್ ದಾಖಲಾಗಿದೆ.

ಕನ್ಯಾನ ನಿವಾಸಿಗಳಾದ ಅಬ್ದುಲ್ ಖಾದರ್ ಹಾಗೂ ಫಝಲ್ ಎಂಬವರಿಗೆ ಘರ್ಷಣೆಯ ವೇಳೆ ಎಸ್ಸೆಸ್ಸೆಫ್ ಕಾರ್ಯಕರ್ತರು ಸೋಡಾ ಬಾಟ್ಲಿಯಿಂದ ಹಾಗೂ ಕಲ್ಲಿ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ೧೮ ಮಂದಿ ಎಸ್ಸೆಸ್ಸೆಫ್ ಕಾರ್ಯಕರ್ತರ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿದ್ದರು. ಇದೀಗ ವಿಟ್ಲ ಪೊಲೀಸರು ಪ್ರಕರಣ ದಾಖ ಲಿಸಿಕೊಂಡಿದ್ದಾರೆ.

Posted in: Special Report