ಅಕ್ರಮ ಗಣಿಗಾರಿಕೆ ಸಂಪೂರ್ಣ ತಡೆಗೆ ಸಾಧ್ಯವಿಲ್ ಲ: ಯಡಿಯೂರಪ್ಪ

Posted on May 31, 2011

0


ಬೆಂಗಳೂರು: ಅಕ್ರಮ ಗಣಿ ಗಾರಿಕೆಯನ್ನು ಪೂರ್ಣವಾಗಿ ತಡೆಗಟ್ಟ ಲು ತಮ್ಮಿಂದ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿ ಕೊಂಡಿದ್ದಾರೆ.

ತಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಳೆದ ಮೂರು ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಶೇ. ೯೦ರಷ್ಟು ಫಲ ದೊರೆತಿ ದ್ದರೂ ಶೇ. ೧೦ರಷ್ಟು ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯಲು ತಾವು ಕಾರಣರಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭ ದಲ್ಲಿ ನೆಟ್ಟ ಮರಗಳು ಬೃಹತ್ ಆಗಿ ಬೆಳೆದು ಅದು ಪಾಪದ ಕೂಸಾಗಿ ಮಾರ್ಪಟ್ಟಿವೆ. ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದವರು ಇಂದು ನಮ್ಮನ್ನು ಪ್ರಶ್ನೆ ಮಾಡಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಆಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಅದಿರು ರಫ್ತು ಕಾರ್ಯಕ್ಕೆ ನಿಷೇಧ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದೆ. ಇಲ್ಲಿನ ಸಂಪತ್ತು ಇಲ್ಲೇ ಉಪಯೋಗವಾಗಲಿ ಎಂದು ಮೌಲ್ಯವರ್ಧಿತ ತೆರಿಗೆ ಲಭ್ಯವಾಗಲು ಇಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಅದಿರು ತೆಗೆಯಲು ಲೈಸೆನ್ಸ್ ನೀಡುವುದಾಗಿ ಹೇಳಿದೆ ಎಂದರು.

Posted in: State News