ತಹಶೀಲ್ದಾರ್ಗೆ ವರ್ಗ: ನಕಲಿ ಚಾಲಕ ಎತ್ತಂಗಡಿ?

Posted on May 31, 2011

0


ಬಂಟ್ವಾಳ: ತಾಲೂಕು ಕಚೇರಿ ವಾಹನ ಚಾಲಕನ ವಿವಾದಕ್ಕೆ ಸಿಲುಕಿದ್ದ ಇಲ್ಲಿನ ತಹಶೀಲ್ದಾರ್ ರವಿಚಂದ್ರ ನಾಕ್ ಅವರನ್ನು ಜಿಲ್ಲಾಡಳಿತ ಕೊನೆಗೂ ಮಂಗಳೂರು ತಾಲೂಕಿಗೆ ವರ್ಗಾ ವಣೆಗೊಳಿಸಿದ್ದು, ಅವರೊಂದಿಗೆ ಮೂರು ವರ್ಷಗಳಿಂದ ಕಚೇರಿ ವಾಹನದಲ್ಲೇ ಠಿಕಾಣಿ ಹೂಡಿದ್ದ ಚಾಲಕನನ್ನು ವಿಟ್ಲಪಡ್ನೂರು ಗ್ರಾಮಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿದ್ದ ತಹಶೀಲ್ದಾರ್ ಜೀಪಿನ ಚಾಲಕರ ವಿವಾದ ಕೊನೆಗೂ ಬಗೆಹರಿದಂತಾಗಿದೆ. ಸರ್ಕಾರ ನೇಮಿ ಸಿದ್ದ ಚಾಲಕ ವೆಲೇರಿಯನ್ ಡಿಸೋಜ ಎಂಬವರಿಗೆ ಮೂರು ವರ್ಷಗಳ ಬಳಿಕ ಹುದ್ದೆ ನಿರ್ವಹಿಸಲು ತಹಶೀಲ್ದಾರರು ನಿನ್ನೆ ಅಧಿಕೃತ ಅವಕಾಶ ನೀಡಿದ್ದು, ಮೂರು ವರ್ಷಗಳಿಂದ ಅನಧಿಕೃತವಾಗಿ ಜೀಪು ಚಲಾಯಿಸುತ್ತಿದ್ದ ವಿಟ್ಲ ಪಡ್ನೂರು ಗ್ರಾಮ ಸಹಾಯಕ ಚಂದ್ರಶೇಖರ್ ಎಂಬವರನ್ನು ಮೂಲ ಸ್ಥಾನಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.

ಮೇ ೨೮ರಂದು ತಾಲೂಕು ಕಚೇರಿ ಆವರಣದಲ್ಲಿ ತಾಲೂಕಿನ ಭ್ರಷ್ಟಾ ಚಾರ ವೇದಿಕೆಯವರು ತಹಶೀಲ್ದಾರ್ ರವಿಚಂದ್ರ ನಾಕ್ ವಿರುದ್ಧ ಜನಾಂ ದೋಲನ ಆಯೋಜಿಸಿ, ಜಿಲ್ಲಾಡಳಿತಕ್ಕೆ ಒತ್ತಡ ಹೇರಿದ್ದರು. ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿದ ತಹಶೀಲ್ದಾರರ ಮೇಲೆ ಗರಂ ಆದ ಜಿಲ್ಲಾಡಳಿತ ಜನ ಹೋರಾಟಕ್ಕೆ ಮನ್ನಣೆ ಯನ್ನು ನೀಡಿದೆ. ಅನಧಿಕೃತ ವ್ಯಕ್ತಿಗಳು ಅಥವಾ ಯಾವುದೇ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಚಲಾಯಿಸು ವಂತಿಲ್ಲ ಎಂದು ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇದ್ದರೂ, ಸಕಾರಣವಿಲ್ಲದೇ ಸರ್ಕಾರಿ ಚಾಲಕನನ್ನು ಬದಿಗಿಟ್ಟು, ಗ್ರಾಮ ಸಹಾಯಕ ಚಂದ್ರಶೇಖರನ್ನು ಇರಿಸಿಕೊಂಡಿದ್ದರು.

ಕಚೇರಿ ವಾಹನ ಚಾಲನೆಗೆ ಅವಕಾಶ ನೀಡದೇ, ವೆಲೇರಿಯನ್ ಡಿಸೋಜರಿಗೆ ಮೂರು ವರ್ಷಗಳಿಂದ ವಿತರಿಸಲಾದ ಸುಮಾರು ೫.೪ ಲಕ್ಷ ರೂ. ವೇತನವನ್ನು ತಹಶೀಲ್ದಾರರಿಂದ ವಸೂಲಿ ಮಾಡುವಂತೆಯೂ, ಕಾನೂನು ಬಾಹಿರವಾಗಿ ನಡೆದು ಕೊಂಡು ಅಧಿಕಾರವನ್ನು ದುರು ಪಯೋಗಪಡಿಸಿದ ಇಲಾಖಾ ಮುಖ್ಯಸ್ಥರುಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಭ್ರಷ್ಟಾಚಾರ ವಿರೋಧಿ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ. ಕಚೇರಿ ಬಳಿ ಭ್ರಷ್ಟಾಚಾರ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಮಾಯಿಸಿ ಜನಾಂದೋಲನ ನಡೆಸಿದಾಗಲೂ ಸ್ಥಳಕ್ಕೆ ಬಾರದೇ ಕಚೇರಿಯೊಳಗೇ ಕುಳಿತ ತಹಶೀಲ್ದಾರರ ವರ್ತನೆ ಜನಪ್ರತಿನಿಧಿಗಳನ್ನು ಆಕ್ರೋಶ ಗೊಳಿಸಿತ್ತು.

ಒಂಬತ್ತು ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ರವಿಚಂದ್ರ ನಾಕ್ ಅವರು ಇಲ್ಲಿನ ಜನಮನದಲ್ಲಿ ಉಳಿಯದೇ ಹೋದದ್ದು ಮಾತ್ರ ದುರಂತ. ಇವರಿಂದ ಮಂಜುನಾಥರೇ ವಾಸಿ ಎನ್ನುವ ಅಭಿಮತ ಇಲ್ಲಿನ ಜನರದ್ದು. ನಿನ್ನೆ ಮಧ್ಯಾಹ್ನ ಸಿಬ್ಬಂದಿ ವರ್ಗಕ್ಕೆ ಗಮ್ಮತ್ತಿನ ಊಟ ಹಾಕಿಸಿ ಇಲ್ಲಿಂದ ತೆರಳಿದ್ದ ತಹಶೀಲ್ದಾರಿಗೆ ಬೀಳ್ಕೊಡಲು

ಒಬ್ಬನೇ ಒಬ್ಬ ನಾಗರಿಕ ಇರಲಿಲ್ಲ. ಸಿಬ್ಬಂದಿ ಮುಖದಲ್ಲೂ ನಗು ಕಾಣು ತ್ತಿತ್ತು. ಮುಂದೆ ಬರುವ ತಹಶೀ ಲ್ದಾರರು ಜನಸ್ನೇಹಿಯಾಗಿರಲಿ ಎನ್ನುವ ಜನಾಶಯಕ್ಕೆ ಜಿಲ್ಲಾಡಳಿತ ಇನ್ನಾದರೂ ಕಿವಿಕೊಟ್ಟಿತೇ?

Advertisements
Posted in: Special Report