ಯುವಕ ಪಲ್ಗುಣಿ ನದಿಪಾಲು

Posted on May 30, 2011

0


ಮಂಗಳೂರು: ಸ್ನಾನ ಮಾಡಲೆಂದು ಮರಕಡ ಬ್ರಿಡ್ಜ್ ಬಳಿ ಪಲ್ಗುಣಿ ನದಿಗೆ ಇಳಿದಿದ್ದ ಯುವಕ ನದಿಪಾಲಾದ ಘಟನೆ ನಿನ್ನೆ ನಡೆದಿದೆ.

ಮೃತ ಯುವಕನನ್ನು ಮೂಲತ: ಮೂಡಬಿದ್ರೆ ನಿವಾಸಿ ರೊನಾಲ್ಡ್ ಆಂಟನಿ ಮಿರಾಂಡ(೪೮) ಂಂಂಂಂಂಂಂಂಂಂಂಂಂಂನ ತನ್ನ ಮಾವ ಡೆನ್ನಿಸ್ ವೇಗಸ್ ಅವರ ವಾಸ್ತವ್ಯವಿದ್ದರು ಎನ್ನಲಾಗಿದೆ. ನಿನ್ನೆ ೧೧:೩೦ರ ಸುಮಾರಿಗೆ ಮರಕಡ ಬಳಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಬಾಬು ಅವರು ಇಲ್ಲಿಯೇ ನಿರ್ಮಾಣವಾಗುತ್ತಿರುವ ಅಣೆಕಟ್ಟಿನ ಬಳಿ ಕೆಲಸ ಮಾಡುತ್ತಿದ್ದು, ನದಿಯ ದಡದಲ್ಲಿ ಚಪ್ಪಲಿ, ಬಟ್ಟೆ ದೊರೆತ ಹಿನ್ನೆಲೆಯಲ್ಲಿ ಡೆನ್ನಿಸ್‌ರಲ್ಲಿ ವಿಚಾರಿಸಿದಾಗ ರೊನಾಲ್ಡ್ ನದಿ ಪಾಲಾಗಿರುವುದು ಬೆಳಕಿಗೆ ಬಂತು. ಬಳಿಕ ನದಿಯಲ್ಲಿ ಹುಡುಕಾಡಿದಾಗ ಕೆಸರಿನಲ್ಲಿ ಹೂತುಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು ಎನ್ನಲಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ವೆನ್‌ಲಾಕ್ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಪತ್ನಿ ಹಾಗೂ ಮಕ್ಕಳು ವಿದೇಶದಲ್ಲಿದ್ದಾರೆ..

ಹಿರಿಯಡ್ಕ: ಅತ್ಯಾಚಾರಿಗೆ ನ್ಯಾಯಾಂಗ ಬಂಧನ

ಮಂಗಳೂರು: ಹಿರಿಯಡ್ಕ ಸಮೀಪದ ಪೆರ್ಡೂರು ನಿವಾಸಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆ ದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ರುವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Posted in: Local News