ಯಾರ ಪರ ಆಡುವುದು ಆಟಗಾರರ ಆಯ್ಕೆ: ಕಪಿಲ್

Posted on May 30, 2011

0


ದೆಹಲಿ: ದೇಶದ ಹಾಗೂ ಕ್ಲಬ್ ನಡುವೆ ಯಾವುದಕ್ಕೆ ಆಡುವುದು ಎಂಬ ನಿರ್ಧಾರ ಸಂಪೂರ್ಣ ಆಟಗಾರನ ವಿವೇಚನೆಗೆ ಬಿಟ್ಟಿದ್ದು ಇದರಲ್ಲಿ ಆತನಿಗೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಭಾರತದ ಮಾಜಿ ಕಪ್ತಾನ ಕಪಿಲ್ ದೇವ್ ಹೇಳಿದ್ದಾರೆ.

ಸಮಯ ಕಳೆದಂತೆಲ್ಲಾ ಎಲ್ಲವೂ ಬದಲಾಗುತ್ತದೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಆಟ ಗಾರನಿಗೆ ಸಂಪೂರ್ಣ ಹಕ್ಕಿದೆ. ನಾನು ದೇಶದ ಪರ ಆಡಲು ಹೆಚ್ಚು ಇಷ್ಟಪ ಡುತ್ತೇನೆ. ಆದರೆ ಇದನ್ನು ಬೇರೆಯವರ ಮೇಲೆ ಹೇರಲು ಸಾಧ್ಯವಿಲ್ಲ. ಹಿಂದೆ ನಾವು ಆರೇಳು ತಿಂಗಳುಗಳ ಕಾಲ ಮಾತ್ರ ಆಡುತ್ತಿದ್ದೆವು. ಆದರೆ ಈಗ ಹೆಚ್ಚು ಕಡಿಮೆ ವರ್ಷ ಪೂರ್ತಿ ಆಟಗಾರರು ಕ್ರಿಕೆಟ್‌ನಲ್ಲೇ ತೊಡಗಿರುತ್ತಾರೆ ಎಂದು ಕಪಿಲ್ ತಿಳಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿ ಸಿದ ಕಪಿಲ್, ಪ್ರಸ್ತುತ ತಂಡದ ಬಗ್ಗೆ ನನಗೆ ಹೆಮ್ಮೆಯಿದ್ದು ತಂಡವು ಮೊದಲ ಬಾರಿ ಜಯಿಸಿದ ತಂಡಕ್ಕಿಂತ ಉತ್ತಮ ವಾಗಿದೆ. ಪ್ರತಿಯೊಂದು ವಿಭಾಗದಲ್ಲಿ ವಿಶ್ವಶ್ರೇಷ್ಠ ಆಟಗಾರರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.a

Advertisements
Posted in: Special Report