ಕೊಣಾಜೆ-ಮಂಗಳೂರು ಬಸ್ಗಳ ಕಿರಿಕಿರಿ ತಪ್ಪಿಸಿ

Posted on May 30, 2011

0


ಕೊಣಾಜೆಯಿಂದ ಕಂಕನಾಡಿವರೆಗೆ ಪ್ರಯಾಣಿಸುವ ಬಸ್‌ಗಳು ಪ್ರಯಾಣಿಕರಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತವೆ. ಕಂಕನಾಡಿಗೆ ಪ್ರಯಾಣಿಸುವ ಬಸ್‌ಗಳು ಸ್ಟೇಟ್‌ಬ್ಯಾಂಕ್‌ಗೆ ಬರುವ ಪ್ರಯಾಣಿಕರನ್ನೂ ಹತ್ತಿಸಿಕೊಂಡು ಅವರನ್ನು ಪಂಪ್‌ವೆಲ್‌ನಲ್ಲಿ ಇಳಿಸಿ ಬೇರೆ ಬಸ್‌ಗೆ ಹತ್ತಿಸುತ್ತಾರೆ. ಇದು ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತದೆ.

ಕಂಕನಾಡಿಗೆ ಪ್ರಯಾಣಿಸುವ ಬಸ್‌ಗಳ ಸಿಬ್ಬಂದಿ ಪ್ರಯಾಣಿಕರನ್ನು ಸ್ಟೇಟ್ ಬ್ಯಾಂಕ್‌ಗೂ ಹೋಗುವುದಾಗಿ ಹೇಳಿ, ಕರೆದು ಹತ್ತಿಸಿಕೊಳ್ಳು ತ್ತಾರೆ. ಆದರೆ ಬಸ್ ಪಂಪ್‌ವೆಲ್‌ಗೆ ತಲುಪು ತ್ತಿದ್ದಂತೆ ಪ್ರಯಾಣಿಕರನ್ನು ಕೆಳಗಿಳಿಸಿ ಅದೇ ಮಾರ್ಗದಲ್ಲಿ ಬರುವ ಹಿಂದಿನ ಬಸ್‌ಗಳಿಗೆ ಹತ್ತಿಸುತ್ತಾರೆ. ಈ ಸಂದರ್ಭ ಹಿಂದಿನಿಂದ ಬರುವ ಬಸ್‌ಗಳು ಮೊದಲೇ ತುಂಬಿರುವು ದರಿಂದ ಅದರಲ್ಲಿ ಹತ್ತುವ ಪ್ರಯಾಣಿಕರು ನಿಂತುಕೊಳ್ಳಲೂ ಆಗದ ಸ್ಥಿತಿಯಲ್ಲಿರುತ್ತಾರೆ. ಇನ್ನೊಂದು ಬಸ್‌ನಲ್ಲಿ ಹತ್ತುವಾಗ ತರಾ ತುರಿ ಮಾಡುವ ಬಸ್ ಸಿಬ್ಬಂದಿ ಪ್ರಯಾಣಿಕ ರೊಂದಿಗೆ ದರ್ಪ ತೋರಿಸುವುದೂ ಇದೆ. ಈ ನಡುವೆ ಸ್ಟೇಟ್‌ಬ್ಯಾಂಕ್‌ಗೆ ಹೋಗುವ ಹಿಂದಿನ ಬಸ್ ಬರುವವರೆಗೂ ಕಾಯ ಬೇಕಾಗುವುದರಿಂದ ಕಂಕನಾಡಿಗೆ ಬರುವ ಬಸ್‌ಗಳು ನಿಧಾನವಾಗಿ ಬರು ತ್ತವೆ. ಪ್ರತಿ ಸ್ಟಾಪ್‌ನಲ್ಲಿ ೩-೪ ನಿಮಿಷಗ ಳವರೆಗೆ ಕಾಯುತ್ತಾ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಂಡು ಪ್ರಯಾಣಿಕ ರಿಗೆ ಕಿರಿಕಿರಿಯುಂಟು ಮಾಡುತ್ತಾರೆ. ಕಂಕನಾಡಿಗೆ ಬರುವ ಬಸ್‌ಗಳು ಕಂಕ ನಾಡಿವರೆಗೆ ಪ್ರಯಾಣಿಸುವ ಪ್ರಯಾಣಿ ಕರನ್ನು ಮಾತ್ರ ಹತ್ತಿಸಿಕೊಳ್ಳುವಂತೆ ಬಸ್ ಸಿಬ್ಬಂದಿಗೆ ನಿರ್ದೇಶಿಸಬೇಕಾಗಿದೆ. ಈ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇ ಕಾಗಿದೆ. ಸುರೇಶ್, ಕೊಣಾಜೆ

Advertisements
Posted in: Special Report