ಕನ್ಯಾನ: ಎ.ಪಿ.-ಇ.ಕೆ. ಮಾರಾಮಾರಿ

Posted on May 30, 2011

0


ವಿಟ್ಲ: ಇ.ಕೆ. ವಿಭಾಗದ ಸುನ್ನೀ ಸಮಾವೇಶ ನಡೆಯುತ್ತಿದ್ದ ಸಂದರ್ಭ ಉಳ್ಳಾಲ ಧರ್ಮಗುರುಗಳನ್ನು ನಿಂದನೆ ಮಾಡಿದರು ಎಂದು ಆರೋಪಿಸಿ ಎಸ್ಸೆಸ್ಸೆಫ್ ಕಾರ್ಯಕರ್ತ ರೆನ್ನಲಾದ ತಂಡವೊಂದು ವೇದಿಕೆಗೆ ನುಗ್ಗಿ ಈ ಬಗ್ಗೆ ಪ್ರಶ್ನಿಸಿದಾಗ ಇತ್ತಂಡದ ಮಧ್ಯೆ ಮಾರಾಮಾರಿಯಾಗಿ ಕಲ್ಲು ತೂರಾಟ ನಡೆದಿದೆ. ಇದರ ಪರಿಣಾಮವಾಗಿ ಇ.ಕೆ ವಿಭಾಗದ ವ್ಯಕ್ತಿಯೋರ್ವನಿಗೆ ಸೋಡಾ ಬಾಟ್ಲಿಯಿಂದ ಹಲ್ಲೆ ನಡೆಸಿದ ಘಟನೆ ವಿಟ್ಲ ಸಮೀಪದ ಕನ್ಯಾನ ಜಂಕ್ಷನ್‌ನಲ್ಲಿ ನಿನ್ನೆ ನಡೆದಿದೆ. ಗಾಯಗೊಂ ಡವರನ್ನು ಕನ್ಯಾನದ ಕಣಿಯೂರು ನಿವಾಸಿ ಇ.ಕೆ. ವಿಭಾಗದ ಫಝಲ್ (೩೫) ಎಂದು ಗುರುತಿಸಲಾಗಿದೆ.

Advertisements
Posted in: Special Report