ಉಡುಪಿ: ಸುಧಾಕರ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆ ಗ್ರಹ

Posted on May 30, 2011

0


ಉಡುಪಿ: ಉಪ್ಪೂರು ಸಮೀಪದ ಕೊಳಲಗಿರಿ ಮುಟ್ಟಿಕಲ್ಲು ನಿವಾಸಿ, ಆಟೋ ರಿಕ್ಷಾ ಚಾಲಕನಾಗಿದ್ದ ಸುಧಾಕರ ಎಂಬವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಸುಧಾಕರ್ ಅವರು ದಲಿತರಾಗಿದ್ದಾರೆ. ದಲಿತರೊ ಬ್ಬರ ಅಸಹಜ ಸಾವಿನ ಪ್ರಕರಣವನ್ನು ಡಿವೈಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸದೆ, ಇನ್ಸ್‌ಪೆಕ್ಟರ್ ಒಬ್ಬರಿಂದ ತನಿಖೆ ನಡೆಸಿ ಮುಚ್ಚಿಹಾಕಿದ್ದಾರೆಂದು ಮೋಟಮ್ಮ ಆರೋಪಿಸಿದ್ದಾರೆ.

ಸುಧಾಕರ್ ಸಾವಿನ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಈ ಸಂಬಂಧ ಸಿಓಡಿ ತನಿಖೆ ನಡೆಸುವಂತೆ ಸರಕಾರದ ಮುಖ್ಯ ಕಾರ್ಯ ದರ್ಶಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

೨೦೧೦ ರ ಜೂನ್ ೨೭ ರಂದು ರಾತ್ರಿ ಮಲ್ಪೆ ಕಡಲ ಕಿನಾರೆಯಲ್ಲಿ ಸುಧಾಕರ್ ಅವರ ಶವ ಪತ್ತೆಯಾಗಿತ್ತು. ಮಲ್ಪೆ ಪೋಲೀಸ್ ಠಾಣೆಯ ಅಂದಿನ ಸಬ್ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಅವರು, ಈ ಅಸಹಜ ಸಾವಿನ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಿದ್ದರು.

ಸುಧಾಕರ್ ಅವರ ತಾಯಿ ಶಾಂತಾ ಅವರು ಬಳಿಕ, ಮಗನ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಗೆಳೆಯರೆಂದು ಹೇಳಿಕೊಂಡ ಕೆಲವರು, ತನ್ನ ಮಗನನ್ನು ದಿನವಿಡೀ ಮದ್ಯ ಕುಡಿಸಿ, ಸಂಚಿನಂತೆ ಕೊನೆಗೆ ಮಲ್ಪೆ ಕಡಲ ಕಿನಾರೆಗೆ ಕರೆದೊಯ್ದು ಸಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆಂದು ತಾಯಿ ಶಾಂತಾ ಮನವಿಯಲ್ಲಿ ವಿವರಿಸಿ ದ್ದರು. ನಂತರ ಪ್ರಕರಣದ ತನಿಖೆಯನ್ನು ಮೂರನೇ ಪುಟಕ್ಕೆ

Advertisements
Posted in: Special Report