ಪತ್ರಕರ್ತನ ವಿರುದ್ಧ ದೂರು ಹಣ ವಸೂಲಿ ಆರೋಪ

Posted on May 23, 2011

0


ಉಡುಪಿ: ಕುಂದಾಪುರದಿಂದ ಪ್ರಕಟವಾಗುವ ‘ನಿಮ್ಮ ಅಭಿಮತ ಮಾಸಿಕ ಪತ್ರಿಕೆ ಸಂಪಾದಕ ವಸಂತ ಗಿಳಿಯಾರ್ ವಿರುದ್ಧ ಮಣಿಪಾಲದ ಮಹಿಳೆಯೊರ್ವಳು ಮಣಿಪಾಲ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಯಾವುದೋ ವಿಷಯಕ್ಕೆ ಸಂಬಂಧಪಟ್ಟಂತೆ ಮಹಿಳೆಯನ್ನು ಸಂಪರ್ಕಿಸಿದ ಸಂಪಾದಕ ಹಣ ನೀಡುವಂತೆ ಒತ್ತಾಯಿಸಿದ್ದರೆನ್ನಲಾ ಗಿದ್ದು, ತಕ್ಷಣ ನೀಡದಿದ್ದ ಪಕ್ಷದಲ್ಲಿ ಮುಂದಿನ ಸಂಚಿಕೆಯಲ್ಲಿ ಮಾನಹಾನಿ ವರದಿ ಪ್ರಕಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿ ಸಿದ್ದು, ಪತ್ರಿಕೆ ಸಂಪಾದಕನ ವಿರುದ್ಧ ಹಲವಾರು ದೂರುಗಳು ಕೇಳಿ ಬರು ತ್ತಿದ್ದು ಉಡುಪಿ ಮತ್ತು ಕುಂದಾಪುರ ತಾಲೂಕಿನಾದ್ಯಂತ ಉದ್ಯಮಿ, ವ್ಯಾಪಾರಿ ಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪದವರ ವಿರುದ್ಧ ಮಾನ ಹಾನಿಕರ ವರದಿ ಪ್ರಕಟಿಸುವುದಾಗಿ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿ ಸಲಾಗಿದೆ. ಈಗಾಗಲೇ ಈತನ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ವ್ಯಕ್ತಿ ಯೋರ್ವರು ಖಾಸಗಿ ದಾವೆ ಹೂಡಿ ದ್ದಾರೆನ್ನಲಾಗಿದೆ.

ಇದಲ್ಲದೆ ಪತ್ರಿಕೆಯ ಡಿಕ್ಲೆರೇಶನ್ ಕೂಡಾ ಸರಿಯಿಲ್ಲವೆಂದು ಒರ್ವ ವ್ಯಕ್ತಿ ಈಗಾಗಲೇ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಕುಂದಾಪುರ ಉಪವಿಭಾ ಗದ ಸಹಾಯಕ ಮೂರನೇ ಪುಟಕ್ಕೆ

Posted in: Local News