ತೀವ್ರ ನಿಗಾದಲ್ಲಿ ರಜನಿ

Posted on May 23, 2011

0


ಚೆನ್ನೈ: ಅನಾರೋಗ್ಯದಿಂದಾಗಿ ಇಲ್ಲಿನ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್‌ನ ಐಸಿಯುನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಇನ್ನು ಕೆಲವು ದಿನಗಳ ಕಾಲ ಐಸಿಯುನಲ್ಲೇ ಇರಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ರಜನಿಕಾಂತ್ ಎಲ್ಲಾ ಅನಾರೋ ಗ್ಯದಿಂದ ಚೇತರಿಸಿಕೊಳ್ಳುವ ತನಕ ಐಸಿಯುನಲ್ಲೇ ಇರಲಿದ್ದಾರೆ. ಅವರು ಸ್ವತಃ ಆಹಾರ ತೆಗೆದುಕೊಳ್ಳುತ್ತಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಅವರು ಟಿವಿ ಕೂಡ ವೀಕ್ಷಿಸುತ್ತಿದ್ದಾರೆ. ಅವರನ್ನು ವಾರ್ಡ್‌ಗೆ ವರ್ಗಾಹಿಸುವ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ವೈದ್ಯರ ಪ್ರಕಟನೆ ತಿಳಿಸಿದೆ.

ಮೇ ೧೩ರಂದು ಶ್ರೀರಾಮಚಂದ್ರ ಆಸ್ಪತ್ರೆಗೆ ರಜನಿಯನ್ನು ದಾಖಲಿಸ ಲಾಗಿತ್ತು. ಮೇ ೧೮ರಂದು ರಜನಿ ಯನ್ನು ಐಸಿಯುಗೆ ದಾಖಲಿಸಲಾ ಗಿತ್ತು ೬೦ ವರ್ಷದ ನಟನನ್ನು ನೋಡಲು ಕೇವಲ ಕುಟುಂಬದ ವರಿಗೆ ಮಾತ್ರ ಅವಕಾಶ ನೀಡಲಾ ಗುತ್ತಿದೆ. ರಾನಾ ಚಿತ್ರದ ಮುಹೂರ್ತ ದಂದೇ ರಜನಿ ಆಸ್ಪತ್ರೆಗೆ ದಾಖಲಾ ಗಿದ್ದರು. ಇದೇ ವೇಳೆ ಅಭಿಮಾನಿಗಳ ಆತಂಕ ಕಡಿಮೆ ಮಾಡಲು ರಜನಿ ಅಳಿಯ ಧನುಷ್, ಸೂಪರ್‌ಸ್ಟಾರ್ ಆಸ್ಪತ್ರೆ ಯಲ್ಲಿ ತನ್ನ ಪುತ್ರಿ ಸೌಂದರ‍್ಯ ಜತೆಗಿ ರುವ ಚಿತ್ರವನ್ನು ಟ್ವಿಟ್ಟರ್‌ಗೆ ಹಾಕಿದ್ದಾರೆ.

Posted in: Special Report