ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಸಿ.ಎಂ. ಲೇವಡಿ

Posted on May 23, 2011

0


ಮಂಗಳೂರು: ರಾಜ್ಯದಲ್ಲಿ ಬಹು ಮತ ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ಅಭಿವೃದ್ದಿ ಕಂಡು ಸಹಿಸದ ಕಾಂಗ್ರೆಸ್ ರಾಜ್ಯಪಾಲರನ್ನು ದಾಳವಾಗಿ ಬಳಸಿ ಬಿಜೆಪಿಯನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. ಆದರೆ ಬಿಜೆಪಿ ಕಾಂಗ್ರೆಸ್‌ನಂತೆ ಮುಳುಗುತ್ತಿರುವ ಹಡ ಗಲ್ಲ ಎಂದು ಸಿಎಂ ಲೇವಡಿ ಮಾಡಿ ದರು.

ನಗರದಲ್ಲಿ ಆಯೋಜಿಸಿದ್ದ ಬೃಹತ್ ಜನಾಂದೋಲನ ರ‍್ಯಾಲಿಯಲ್ಲಿ ಭಾಗ ವಹಿಸಲು ನಗರಕ್ಕೆ ಬಂದಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ವಿರೋಧ ಪಕ್ಷದ ಬಗೆಗಿನ ತನ್ನ ಅಸಮಾಧಾನ ವ್ಯಕ್ತ ಪಡಿ ಸಿದರು.

ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸರಕಾರ ರಚಿಸಿದಾಗ ದೇವೇಗೌಡರು ಹೇಳಿದ್ದಕ್ಕೆಲ್ಲ ಕಾಂಗ್ರೆಸ್ ಹೈಕಮಾಂಡ್ ಸೈ ಅನ್ನುತ್ತಿತ್ತು ಆದರೆ ಇವರಂತೆ ನೀತಿಗೆಟ್ಟ ಹೈಕಮಾಂಡ್ ನಮ್ಮದಲ್ಲ ಅವರಿಗೆ ಒಂದು ಬದ್ದತೆ ಇದೆ ಎಂದು ಮುಖ್ಯಮಂತ್ರಿ ಕಾಂಗ್ರೆಸನ್ನು ಕುಟುಕಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಲಾಗದ ಹತಾಶೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಅಪಪ್ರಚಾರಕ್ಕೆ ಇಳಿದಿದೆ ಆದರೆ ಮೂರನೇ ಪುಟಕ್ಕೆ

Posted in: Local News