ರಜನಿ ಸತ್ತರೆಂಬ ಗಾಳಿಸುದ್ದಿ!

Posted on May 23, 2011

0


ತಮಿಳರ ಆರಾಧ್ಯ ದೈವವೆಂದೇ ಬಿಂಬಿತವಾಗಿರುವ ರಜನಿಕಾಂತ್ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದಾಗ ಸಾಮಾಜಿಕ ತಾಣಗಳಲ್ಲಿ ಇವರ ಆರೋಗ್ಯದ ಕುರಿತು ವದಂತಿಗಳು ಹಬ್ಬಿದ್ದವು. ಕೆಲ ಸೋಶಿಯಲ್ ನೆಟ್ ವರ್ಕ್‌ಗಳಲ್ಲಿ ಕಿಡಿಗೇಡಿಗಳು ರಜನಿಕಾಂತ್ ಸತ್ತೇ ಹೋದರು ಎಂಬಂತೆ ಸುದ್ದಿ ಹಬ್ಬಿಸಿದ್ದರು.

ಈ ರೀತಿಯ ಗಾಳಿ ಸುದ್ದಿಗಳು ಒಂದು ಹಂತದಲ್ಲಿ ತಲೈವರ್ ಅಭಿಮಾನಿಗಳನ್ನು ಧಿಗ್ಭ್ರಮೆಗೊಳಿಸಿತ್ತಾದರೂ, ನಂತರ ಅದು ಸುಳ್ಳೆಂದು ತಿಳಿದಾಗ ನಿಟ್ಟುಸಿರು ಬಿಟ್ಟಿದ್ದರು ಇವರ ಅಭಿಮಾನಿಗಳು. ಅಲ್ಲದೇ ನಾಗವಲ್ಲಿಯ ಮುಂದಿನ ಟಾರ್ಗೆಟ್ ರಜನಿಕಾಂತ್ ಎನ್ನುವ ಸುದ್ದಿಯಂತು ಒಂದು ಹಂತದಲ್ಲಿ ರಜನಿ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ತಮಿಳಿನ ಸೂಪರ್ ಸ್ಟಾರ್ ಆಸ್ಪತ್ರೆ ಸೇರಿದಾಗ ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಚೆನ್ನೈನ ಆಸ್ಪತ್ರೆ ಮುಂದೆ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವ ದೃಶ್ಯ ಸಾಮಾನ್ಯವಾಗಿತ್ತು.

Advertisements
Posted in: Special Report