ಜೀಪ್ಗೆ ಬಡಿದ ರೈಲು: ೨೦ ಮಂದಿ ಮೃತ್ಯು

Posted on May 23, 2011

0


ಮಧುಬನಿ: ತಡೆರಹಿತ ರೈಲ್ವೇ ಕ್ರಾಸಿಂಗ್‌ನಲ್ಲಿ ಗರೀಬ್ ರಥ್ ರೈಲೊಂದು ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ೧೯ ಮಂದಿ ಮಹಿಳೆಯರ ಸಹಿತ ೨೦ ಮಂದಿ ಮೃತಪಟ್ಟು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಭಾರಿಯಾ ಬಿಶ್ನಾಪುರ್ ಗ್ರಾಮದಲ್ಲಿ ನಡೆದಿದೆ.

೧೬ ಮಂದಿ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಮೂರು ಮಂದಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದರು. ಗಂಭೀರ ಗಾಯ ಗೊಂಡಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಪೊಲೀಸ್ ಮೂಲ ಗಳು ಹೇಳಿವೆ.

ಮಾನವರಹಿತ ರೈಲ್ವೆ ಕ್ರಾಸಿಂಗ್‌ನ್ನು ಕ್ರಾಸ್ ಮಾಡಲು ಪ್ರಯತ್ನಿಸುತ್ತಿದ್ದಾಗ ನಿಜಾಮುದ್ದೀನ್-ಜೈನಗರ್ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲು ಬಡಿದು ಜೀಪ್‌ನಲ್ಲಿದ್ದವರು ಮೃತಪಟ್ಟರು. ಇವರು ತಮ್ಮ ಸಂಬಂಧಿ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸಂಭ್ರಮವನ್ನು ಆಚರಿಸಲು ತೆರಳುತ್ತಿದ್ದರು. ಗಾಯ ಗೊಂಡವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Advertisements
Posted in: Special Report