ಗಾಂಜಾ ಗ್ಯಾಂಗ್: ನಿದ್ದೆಯಲ್ಲಿ ಪೊಲೀಸರು

Posted on May 23, 2011

0


ಮಂಗಳೂರು: ಪೊಲೀಸರ ಮಂದಗತಿಯ ಕಾರ್ಯಾಚರಣೆಗೆ ಕವಡೆ ಕಿಮ್ಮತ್ತನ್ನೂ ನೀಡದ ಗಾಂಜಾ ಗ್ಯಾಂಗ್ ತನ್ನ ವೈವಾಟನ್ನು ನಗರ ವ್ಯಾಪ್ತಿಯೊಳಗೆ ವಿಸ್ತರಿಸಿಕೊಂಡ ಉನ್ಮಾದತೆಯಲ್ಲಿದ್ದರೆ ಪೊಲೀಸರು ಮಾತ್ರ ಮೆಲು ನಿದ್ದೆಯಲ್ಲಿದ್ದಾರೆ.

ಸರ್ವಿಸ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಲಾಡ್ಜೊಂದರಲ್ಲಿ ರೂಮ್ ಮಾಡಿಕೊಂಡಿರುವ ಆರು ಮಂದಿ ಯುವಕರ ತಂಡವೊಂದು ಸಿಗರೇಟು ಪ್ಯಾಕಿನೊಳಗೆ ಗಾಂಜಾ ತುರುಕಿ ವ್ಯವಹಾರ ನಡೆಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರತಿದಿನ ಸಂಜೆ ಐದು ಗಂಟೆ ಯಿಂದ ಏಳು ಗಂಟೆವರೆಗೆ ನಗರದ ಕೇಂದ್ರ ಮೈದಾನದ ಫುಟ್‌ಬಾಲ್ ಮೈದಾನದಲ್ಲಿ ಪವಡಿಸುವ ಈ ತಂಡ ಅಲ್ಲಿಯೇ ತಮ್ಮ ವ್ಯವಹಾರವನ್ನು ನಡೆಸುತ್ತಿದ್ದಾರೆ. ಸುಮ್ಮನೆ ಹರಟೆ ಹೊಡೆಯುವವರಂತೆ ಕುಳಿತುಕೊಳ್ಳುವ ತಂಡಕ್ಕೆ ಕತ್ತಲು ಆವರಿಸುತ್ತಿರುವಂತೆ ಒಬ್ಬೊಬ್ಬರೆ ಬಂದು ಸೇರಿಕೊಂಡು ಅಲ್ಲಿಯೇ ಧಂ ಎಳೆಯುತ್ತಾರೆ. ಇದು ಪ್ರತಿದಿನ ನಡೆಯುತ್ತಿರುವ ಘಟನೆಯಾ ಗಿದ್ದು ಇದನ್ನು ಪ್ರತ್ಯಕ್ಷ ಕಂಡ ಪತ್ರಿಕಾ ವರದಿಗಾರರು ಸ್ಥಳದಿಂದಲೇ ಪೊಲೀಸ ರಿಗೆ ಮಾಹಿತಿ ನೀಡಿದರೂ ಅವರು ಈ ಬಗ್ಗೆ ಗಮನ ಹರಿಸದೇ ಇರುವುದು ಪೊಲೀಸರು ಮೂರನೇ ಪುಟಕ್ಕೆ

Advertisements
Posted in: Local News