ಅಪಘಾತಕ್ಕೆ ಯುವಕ ಬಲಿ

Posted on May 23, 2011

0


ಮಂಗಳೂರು: ಬೈಕ್ ಚಲಾ ಯಿಸುತ್ತಿದ್ದ ವೇಳೆ ನಿಯಂತ್ರಣ ಕಳಕೊಂಡ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಿನ್ನೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಮುಲ್ಲಕಾಡು ಶಿವನಗರ ನಿವಾಸಿ ಶೀನ ದೇವಾಡಿಗ ಎಂಬವರ ಪುತ್ರ ಪವನ್ ಕುಮಾರ್(೧೭) ಎಂಬಾತ, ತನ್ನ ಮಿತ್ರನ ಬೈಕಿನಲ್ಲಿ ಕಾವೂರು ಬಳಿ ಬರುತ್ತಿರುವಾಗ ಮುಲ್ಲಕಾಡು ಬಳಿಯ ತಿರುವಿನಲ್ಲಿ ಪವನ್ ಬೈಕ್‌ನ ನಿಯಂತ್ರಣ ಕಳೆದುಕೊಂಡು ಕಾರಣ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದ.

ಇದರಿಂದಾಗಿ ರಸ್ತೆಗೆಸೆಯಲ್ಪಟ್ಟ ಪವನ್ ಗಂಭೀರವಾಗಿ ಗಾಯ ಗೊಂಡಿದ್ದು ಈತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾ ಯಿತಾದರೂ ದಾರಿ ಮಧ್ಯೆ ಆತ ಮೃತ ಪಟ್ಟನೆಂದು ತಿಳಿದು ಬಂದಿದೆ.

Advertisements
Posted in: Local News