ಮೊಬೈಲ್ ಅಂಗಡಿಯಲ್ಲಿ ಕಳವು

Posted on May 22, 2011

0


ಮಂಗಳೂರು: ಮೊಬೈಲ್ ಮಾರಾ ಟದ ಅಂಗಡಿಗೆ ನುಗ್ಗಿದ ಕಳ್ಳರು ಸಾವಿ ರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಬೈಂದೂ ರಿನ ಕೆರ್ಗಾಲು ಗ್ರಾಮದಲ್ಲಿರುವ ನಾಯ್ಕನಕಟ್ಟೆಯಲ್ಲಿ ನಡೆದಿದೆ.

ನಾಗರಾಜ್ ದೇವಾಡಿಗ ಎಂಬರಿಗೆ ಸೇರಿದ ಶ್ರೀಜಟ್ಟಿಗೇಶ್ವರ ಎಂಬ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಲ್ಯಾಪ್ ಟಾಪ್, ೧೩ ಮೊಬೈಲ್ ಸೆಟ್‌ಗಳು ಮೆಮೊರಿ ಕಾರ್ಡ್, ಪೆನ್‌ಕಾರ್ಡ್, ಚಾರ್ಜರ್, ಕಾರ್ಡ್ ರೀಡರ್ ಸೇರಿ ದಂತೆ ೩೬೫೦ ರೂ. ನಗದು ಕಳವುಗೈದಿ ದ್ದಾರೆ. ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ೨೩,೫೦೦ ರೂ. ಎಂದು ಅಂದಾಜಿಸಲಾಗಿದೆ.

Posted in: Local News