ಡೆಕ್ಕನ್ಗೆ ೮೨ ರನ್ಗಳ ಜಯ ನುಚ್ಚುನೂರಾದ ಪಂಜಾಬ್ ನ ಪ್ಲೇ ಆಫ್ ಕನಸು

Posted on May 22, 2011

0


ಧರ್ಮಶಾಲಾ: ಶಿಖರ್ ಧವನ್ ಹಾಗೂ ರವಿತೇಜಾ ನಡೆಸಿದ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ಪಡೆದ ತನ್ನ ಎರಡನೇ ಹ್ಯಾಟ್ರಿಕ್ ನೆರವಿನಿಂದ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಕ್ಕನ್ ಚಾರ್ಜರ‍್ಸ್ ೮೨ ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ ಪಂಜಾ ಬ್‌ನ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವ ಆಸೆ ಕಮರಿ ಹೋಗಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆ ಸಿದ ಡೆಕ್ಕನ್ ಚಾರ್ಜರ‍್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಗದಿತ ೨೦ ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ೧೯೮ ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನತ್ತಿದ ಡೆಕ್ಕನ್ ೧೯ ಓವರ್‌ಗಳಲ್ಲಿ ೧೧೬ ರನ್‌ಗಳಿಗೆ ಸರ್ವಪತನ ಕಂಡಿತು. ಬೃಹತ್ ಮೊತ್ತ ಬೆನ್ನತ್ತುವಲ್ಲಿ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಸ್ಫೋಟಕ ಆಟಗಾರರಾದ ಪಾಲ್ ವಲ್ತಟಿ (೫) ಹಾಗೂ ಮಾರ್ಶ್ (೧೩) ಅಲ್ಪ ಮೊತ್ತಕ್ಕೆ ನಿರ್ಗಮಿಸಿದಾಗ ತಂಡ ಮರ್ಮಾಘಾತ ಕಂಡಿತು. ಈ ವೇಳೆ ತಂಡ ೨೨ ರನ್ ಗಳಿಸಿತ್ತು. ಆದರೆ ನಾಯಕ ಗಿಲ್‌ಕ್ರಿಸ್ಟ್ ಹಾಗೂ ಕಾರ್ತಿಕ್ ಜೋಡಿ ಮೂರನೇ ವಿಕೆಟ್‌ಗೆ ೭.೪ ಓವರ್‌ಗಳಲ್ಲಿ ೬೧ ರನ್ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಕೇವಲ ಒಂದು ರನ್‌ಗಳ ಅಂತರದಲ್ಲಿ ಇಬ್ಬರೂ ಬ್ಯಾಟ್ಸ್‌ಮೆನ್‌ಗಳು ನಿರ್ಗಮಿಸುವುದರೊಂದಿಗೆ ತಂಡದ ಸೋಲು ಖಚಿತವಾಗುವ ಲಕ್ಷಣ ತೋರಿತು. ಮೆಕ್‌ಲ್ಯಾರೆನ್ (೯), ನಾಯರ್ (೩) ಹಾಗೂ ಮಂದೀಪ್ (೭) ಕೂಡ ತಂಡದ ಸೋಲಿನ ಅಂತರ ತಗ್ಗಿಸುವಲ್ಲಿ ವಿಫಲರಾದರು. ಹ್ಯಾಟ್ರಿಕ್ ಒಳಗೊಂಡ ನಾಲ್ಕು ವಿಕೆಟ್ ಪಡೆದ ಮಿಶ್ರಾ ಬೌಲಿಂಗ್ ವಿಭಾಗದಲ್ಲಿ ಮಿಂಚಿದರು.

ಇದಕ್ಕೂ ಮೊದಲು ಬ್ಯಾಟ್ ನಡೆಸಿದ ಡೆಕ್ಕನ್‌ಗೆ ಆರಂಭಿಕರಾದ ಧವನ್ ಹಾಗೂ ರವಿತೇಜಾ ಭರ್ಜರಿ ಯಾದ ಆರಂಭವನ್ನೇ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ ೧೩.೨ ಓವರ್‌ಗಳಲ್ಲಿ ೧೩೧ ರನ್ ಕಲೆಹಾಕಿ ಸದೃಡ ಆರಂಭ ನೀಡಿ ದರು. ಈ ವೇಳೆ ಎರಡು ಸಿಕ್ಸ್ ಹಾಗೂ ಐದು ಬೌಂಡರಿ ನೆರವಿನಿಂದ ೬೦ ಅರ್ಧಶತಕ ಸಿಡಿಸಿ ಆಡುತ್ತಿದ್ದ ರವಿತೇಜಾ ನಿರ್ಗಮಿಸಿದರು. ಡ್ಯುಮಿನಿ (೧೨) ವಿಫಲತೆ ಕಂಡರೂ ಆರಂಭಿಕ ಧವನ್ ತಂಡದ ನೆರವಿಗೆ ನಿಂತರು. ವೈಟ್ (೧೫) ಜೊತೆಗೂಡಿ ಅಜೇಯ ೪೦ ರನ್‌ಗಳ ಜೊತೆಯಾಟ ನಡೆಸಿ ದರು. ಅಂತಿಮವಾಗಿ ಧವನ್ ೫೭ ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ೧೪ ಬೌಂಡರಿಗಳ ನೆರವಿನಿಂದ ಅಜೇಯ ೯೫ ರನ್ ಪೇರಿಸಿ ಅರ್ಹ ಶತಕದಿಂದ ವಂಚಿತರಾದರು.

Advertisements
Posted in: Sports News