ಗ್ಲೋಬಲ್ ಇಂಡೆಕ್ಸ್ ವಿರುದ್ಧ ಮತ್ತೆ ದೂರು ಮುಗಿ ಯದ ಬ್ಲೇಡ್ ಕಂಪೆನಿಗಳ ರಗಳೆ

Posted on May 22, 2011

0


ಮಂಗಳೂರು: ಅಪಾರ ಬಡ್ಡಿಯ ಆಸೆ ಹುಟ್ಟಿಸಿ ಜನರಿಂದ ಲಕ್ಷಾಂತರ ರೂ. ಸಂಗ್ರ ಹಿಸಿ ಮೋಸ ಮಾಡಿದ ಮಹೇಂದ್ರ ಆರ್ಕೆಡ್‌ನಲ್ಲಿ ಕಚೇರಿ ಹೊಂದಿರುವ ಗ್ಲೋಬಲ್ ಇಂಡೆಕ್ಸ್ ಕಂಪೆನಿಯ ವಿರುದ್ಧ ಶನಿವಾರ ಇಬ್ಬರು ಮಹಿಳೆಯರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾನು ಜನವರಿಯಲ್ಲಿ ೩೦ಸಾವಿರ ರೂ. ತೊಡಗಿಸಿದ್ದು, ಇದಾದ ಕೆಲವು ದಿನಗಳ ಬಳಿಕ ಆರೋಪಿ ಅಶೋಕ ಕುಮಾರ್‌ಗೆ ದೂರುವಾಣಿ ಕರೆ ಮಾಡಿ ದಾಗ ಸ್ವಿಚ್ ಆಫ್ ಇತ್ತು. ಫೆ.೧೦ರಂದು ಮಹೇಂದ್ರ ಆರ್ಕೆಡ್‌ಗೆ ಬಂದು ನೋಡಿದರೆ ಕಚೇರಿಗೆ ಬೀಗ ಜಡೆದಿತ್ತು. ಅಲ್ಲಿ ಕೆಲಸ ಮಾಡಿಕೊಂಡಿದ್ದ ಅಶೋಕ್ ಕುಮಾರ್, ಪ್ರವೀಣ್ ಶೆಟ್ಟಿ, ಶೇಖರ್ ಭಟ್ ತಲೆ ಮರೆಸಿಕೊಂಡಿದ್ದಾರೆ. ಇವರು ಇತರರಿಗೂ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ ಎಂದು ಮೂಲ್ಕಿ ಬಪ್ಪನಾ ಡಿನ ಕುಸುಮಾ ಆರ್. ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

ಮಲ್ಕಿಯವರೇ ಆದ ಜಯಶ್ರಿ ಕೆ. ನಾಯಕ ಎಂಬವರೂ ಕೂಡ ದೂರು ದಾಖಲಿಸಿದ್ದು ತಾನು ಸಂಸ್ಥೆಯಲ್ಲಿ ಜನವರಿ ೭ರಂದು ಎರಡು ಲಕ್ಷ ರೂ. ತೊಡಗಿಸಿದ್ದು, ವಂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಹತ್ತಾರು ದೂರು ಗಳು ಗ್ಲೋಬಲ್ ಇಂಡೆಕ್ಸ್ ವಿರುದ್ಧ ದಾಖಲಾಗಿವೆ.

Advertisements
Posted in: Local News