ಎಂಜನಿಯರ್ ಯುವತಿಯ ಆತ್ಮಹತ್ಯೆ

Posted on May 22, 2011

0


ಮಂಗಳೂರು: ಎಂಜನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಯೋರ್ವಳು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಅತ್ಮಹತ್ಯೆಗೆ ಶರಣಾದ ಘಟನೆ ಬ್ರಹ್ಮಾವರ ಸಮೀಪದ ಕೆ.ಜಿ. ರೋಡ್ ಸಾಲ್ಮರ ಎಂಬಲ್ಲಿ ಶನಿವಾರ ನಡೆದಿದೆ.

ಮೃತರನ್ನು ಬ್ರಹ್ಮಾವರ ಎಸ್‌ಎಂಎಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಸ್.ನರೋನ್ಹ ಎಂಬವರ ಪುತ್ರಿ ಈಬಾ ನರೋನ್ಹ (೨೫) ಎಂದು ಗುರುತಿಸಲಾಗಿದೆ. ಬೈಕಾ ಡಿಯ ಭದ್ರಗಿರಿಯಲ್ಲಿರುವ ಮನೆಯಿಂದ ಮಧ್ಯಾಹ್ನ ತೆರಳಿದ್ದ ಈಕೆ ಮುಂಬೈ ಯಿಂದ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟಳು ಎಂದು ಹೇಳಲಾಗಿದೆ.

ಮೂಡ್ಲಕಟ್ಟೆಯಲ್ಲಿ ಎಂಜನಿಯ ರಿಂಗ್ ಪದವಿ ಮುಗಿಸಿದ್ದ ಈಬಾ, ಇತ್ತೀಚೆಗಷ್ಟೇ ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಹೋಗು ತ್ತಿದ್ದಳು. ನಾಲ್ಕೈದು ವರ್ಷಗಳಿಂದ ಮಾನಸಿಕವಾಗಿ ಕುಗ್ಗಿದ್ದ ಈಬಾ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

Advertisements
Posted in: Local News