ಆಘಾತದಿಂದ ಇನ್ನೂ ಹೊರಬರದ ಕುಟುಂಬ

Posted on May 22, 2011

0


ಮಂಗಳೂರು: ವಿಮಾನ ದುರಂ ತದಲ್ಲಿ ಮೃತಪಟ್ಟ ೧೫೮ ಮಂದಿಯ ಪೈಕಿ ಉಳ್ಳಾಲ ಕೋಟೆಪುರದ ಒಂದೇ ಕುಟುಂಬದ ಐದು ಮಂದಿ ಸೇರಿದ್ದು, ಮನೆಮಂದಿ ಐದು ಜೀವಗಳ ಸಾವಿನಿಂದ ಆಗಿರುವ ಆಘಾತದಿಂದ ಇನ್ನೂ ಮೇಲೆ ಬಂದಿಲ್ಲ.

ದುಬೈನಲ್ಲಿ ಕಂಪ್ಯೂಟರ್ ಇಂಜಿನಿ ಯರ್ ಆಗಿ ಕೆಲಸದಲ್ಲಿದ್ದ ಮಹಮ್ಮದ್ ಅಶ್ರಫ್ ಪತ್ನಿ ಆಯಿಷಾ ಅಶ್ರಫ್ ಹಾಗೂ ಇಬ್ಬರು ಮಕ್ಕಳು ಮತ್ತು ಸುಪರ್ ವೈಸರ್ ಆಗಿದ್ದ ಅಶ್ರಫ್ ಸಹೋದರ ನೌಷಾದ್ ಎಂಬವರು ಮೃತಪಟ್ಟಿದ್ದರು. ಜೂನ್ ೧೩ ರಂದು ನಿಗದಿಯಾಗಿದ್ದ ನೌಷಾದ್ ವಿವಾಹ ಸಮಾರಂಭಕ್ಕೆ ಇವರು ಜೊತೆಯಾಗಿ ಊರಿಗೆ ಆಗಮಿ ಸಿದ್ದರು. ಆದರೆ ಪೈಲೆಟ್ ನಿದ್ದೆಯ ಮಂಪರೋ ಅಥವಾ ವಿಧಿಯ ಕ್ರೂರ ಲೀಲೆಯೋ ಎನ್ನುವಷ್ಟರಲ್ಲಿ ೧೫೮ ಮಂದಿ ಮೃತಪಟ್ಟವರಲ್ಲಿ ಇಬ್ಬರು ಮುಗ್ದ ಮಕ್ಕಳೊಂದಿಗೆ ಮೂರು ಜೀವಗಳು ಸೇರಿಕೊಂಡವು. ಮದುವೆ ಸಂಭ್ರಮ ದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣಗೊಂಡಿತ್ತು. ಇದರಿಂದ ಆಘಾತಗೊಂಡಿರುವ ಇವರ ತಾಯಿ ಐಸಮ್ಮ ಜೀವನ ಪೂರ್ತಿ ಮರೆಯಲಾಗದ ಮಕ್ಕಳು ಮೊಮ್ಮಕ್ಕಳ ನೆನಪಿನಲ್ಲಿ ದಿನದೂಡುತ್ತಿ ದ್ದಾರೆ. ಇವರೊಂದಿಗೆ ಬರಬೇಕಿದ್ದ ಮೃತ ಅಶ್ರಫ್‌ರವರ ಇನ್ನೋರ್ವ ಸಹೋದರ ಇರ್ಷಾದ್ ಕಂಪೆನಿ ರಜೆ ನೀಡದೇ ಇದ್ದುದರಿಂದ ಅಲ್ಲೇ ಬಾಕಿ ಯುಳಿದಿದ್ದವರ ಮೇಲೆ ಇದೀಗ ಸಂಸಾರದ ಜವಾಬ್ದಾರಿ ಇದೆ. ಘಟನೆ ಬಳಿಕ ಮತ್ತೆ ವಿದೇಶಕ್ಕೆ ಕೆಲಸಕ್ಕೆ ಹೋಗಲೆಂದು ಸಿದ್ಧತೆಯಲ್ಲಿದ್ದ ಇರ್ಷಾದ್‌ರನ್ನು ತಾಯಿ ಐಸಮ್ಮ ಅವರು ಆಗಿರುವ ಆಘಾತವನ್ನು ಮತ್ತೆ ಮರುಕಳಿ ಸದೇ ಇರುವ ಹೆದರಿಕೆಯಿಂದ ತೆರಳ ಲು ಬಿಡಲಿಲ್ಲ.ಇದರಿಂದಾಗಿ ಇರ್ಷಾದ್ ಇಲ್ಲೇ ಉಳಿದು ಏರ್ ಇಂಡಿಯಾ ಭರವಸೆ ನೀಡಿದ್ದ ಕೆಲಸಕ್ಕೆ ಅಲೆದಾಡಿ ದರೂ ಪ್ರಯೋಜನ ವಾಗದೆ ಮನೆ ಯಲ್ಲೇ ಉಳಿದಿದ್ದಾರೆ. ಮೃತರಿಗೆ ಕೇವ ಲ ಮಧ್ಯಂತರ ಪರಿಹಾರ ಮಾತ್ರ ಸಿಕ್ಕಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಇರ್ಷಾದ್ ಪರಿಹಾರ ಸಿಗದೇ ಇದ್ದರೂ ಹೋದ ಜೀವಗಳು ಮತ್ತೆ ಬರಲು ಸಾಧ್ಯ ವಿಲ್ಲವಲ್ಲ ಎಂಬ ದು:ಖದ ಮಾತಿ ನೊಂದಿಗೆ ಸಮಯ ಕಳೆಯುತ್ತಿದ್ದಾರೆ.

Advertisements
Posted in: Local News