ಅಂಗನವಾಡಿ ಸಭೆ: ಕಾಂಗ್ರೆಸೀಕರಣ

Posted on May 22, 2011

0


ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣ ದಲ್ಲಿ ನಿನ್ನೆ ಇಲ್ಲಿನ ಅಂಗನವಾಡಿ ಕಾರ್ಯ ಕರ್ತರ ಹಾಗೂ ಸಹಾಯಕಿಯರ ಸಂಘದವರು ಏರ್ಪಡಿಸಿದ ಸಭೆ ಸಂಪೂರ್ಣ ಕಾಂಗ್ರೆಸ್ ಮಯವಾಗಿದೆ. ಆಮಂತ್ರಣ ಪತ್ರಿಕೆಯಲ್ಲಿದ್ದ ಬಿಜೆಪಿ ಜನಪ್ರತಿನಿಧಿಗಳ ಗೈರು ಹಾಜರಿ, ಇಲಾ ಖಾಧಿಕಾರಿಗಳ ಅನುಪಸ್ಥಿತಿ ಸಂಘಟ ಕರನ್ನು ಕಸಿವಿಸಿಗೊಳಿಸಿದರೆ; ಕಾಂಗ್ರೆಸ್ಸಿ ಗರನ್ನು ಮಾತ್ರ ಸ್ವಲ್ಪ ಬೀಗುವಂತೆ ಮಾಡಿದ್ದು ಸತ್ಯ! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳ ಜೊತೆಗೆ ಮುಖಾ-ಮುಖಿ ಸಂಘಟಿಸಿ ದ್ದರೂ, ಕಾರ್ಯಕರ್ತೆಯರ ಸಮಸ್ಯೆ ಗಳನ್ನು ಆಲಿಸಲು ಒಬ್ಬನೇ ಒಬ್ಬ ಅಧಿ ಕಾರಿ ಇರಲಿಲ್ಲ. ಕೆಲಸಕ್ಕೆ ಸಂಬಂಧಿಸಿದ ಬೇಡಿಕೆ ಪಟ್ಟಿಗೆ ಸ್ಪಂದಿಸಲು ಶಿಶು ಅಭಿ ವೃದ್ಧಿ ಯೋಜನಾಧಿಕಾರಿ ಉಸ್ಮಾನ್ ಹಾಗೂ ಕಚೇರಿಯ ಇತರ ಅಧಿಕಾರಿ ಗಳು ಬಂದಿರಲಿಲ್ಲ. ಸಂಘಟಕರ ಸಾಕಷ್ಟು ಪೂರ್ವ ತಯಾರಿ ಹಾಗೂ ಸಿದ್ಧತೆಗೆ ಇಲಾಖೆ ಹಾಗೂ ಸ್ಥಳೀಯ ಬಿಜೆಪಿ ಜನಪತ್ರಿನಿಧಿಗಳು ತನ್ನೀರೆರೆಚಿದ್ದರು.

ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಜಿ.ಪಂ.ಅಧ್ಯಕ್ಷೆ ಶ್ರೀಮತಿ ಶೈಲಜಾ ಕೆ.ಟಿ, ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಸಂತೋಷ್ ಕುಮಾರ್ ರೈ, ಶ್ರೀಮತಿ ಜಯಶ್ರೀ ಕೆ.ಎ, ಶ್ರೀಮತಿ ನಳಿನಿ ಶೆಟ್ಟಿ, ಶ್ರೀಮತಿ ಗಿರಿಜಾ, ತಾ.ಪಂ.ಅಧ್ಯಕ್ಷೆ ಶ್ರೀಮತಿ ಶೈಲಜಾ ಶೆಟ್ಟಿ ಸಾಮೂಹಿಕ ಗೈರು ಹಾಜರಿಯಾದ ಗಣ್ಯರು! ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ರಮಾನಾಥ ರೈ ಅವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಉತ್ತರಿಸಲಾಗದ ಬಿಜೆಪಿ ಜನಪ್ರತಿನಿಧಿಗಳು ನುಸುಳಿಕೊಂಡಿದ್ದಾರೆ ಎಂದು ಆರೋಪಿಸಿದರು. ಶಾಸಕ ಯು.ಟಿ. ಖಾದರ್ ಅವರು ಮಾತನಾಡಿ ಜಿ.ಪಂ, ತಾ.ಪಂ.ನ ಒಬ್ಬನೇ ಒಬ್ಬ ಬಿಜೆಪಿ ಪ್ರತಿನಿಧಿಗೆ ಜನ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ದೂರಿದರು.

ಜಿ.ಪಂ.ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ಮಹಾನಗರ ಪಾಲಿಕೆ ಸದಸ್ಯೆ ಅಪ್ಪಿ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಗ್ರಾ.ಪಂ. ಸದಸ್ಯ ರಾದ ರಘು ಪೂಜಾರಿ, ಅಮ್ಮುಂಜೆ, ಶ್ರೀಮತಿ ಗಿರಿಜಾ ವೇದಿಕೆಯಲ್ಲಿದ್ದರು. ಈ ಪೈಕಿ ಜೆಡಿಎಸ್ ಮುಖಂಡ ಕರಿ ಯಂಗಳ ಗ್ರಾ.ಪಂ.ಸದಸ್ಯ ಡಿ.ಎ. ಅಬೂಬಕ್ಕರ್ ಅವರು ಮಾತ್ರ ಅನ್ಯಪಕ್ಷೀ ಯರಾಗಿದ್ದರು. ಸಭೆಯಲ್ಲಿ ಬಿಜೆಪಿ ಬೆಂಬಲಿತ ಕೆಲವು ಗ್ರಾ.ಪಂ. ಜನಪ್ರತಿ ನಿಧಿಗಳಿದ್ದರೂ ಅವರನ್ನು ವೇದಿಕೆಗೆ ಆಹ್ವಾನಿಸಿರಲಿಲ್ಲ. ಬಿಜೆಪಿಯವರ ಸಾಮೂಹಿಕ ಗೈರು ಹಾಜರಿಗೆ ಕಾರಣ ವೇನೆಂದು ಗೊತ್ತಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದು ಮಾತ್ರ ಎಲ್ಲರ ಗಮನಕ್ಕೆ ಬಂದಿತ್ತು.

Advertisements
Posted in: Special Report