ಶಾರ್ಟ್ ಸರ್ಕಿಟ್: ಕೊಟ್ಟಿಗೆ ಭಸ್ಮ

Posted on May 21, 2011

0


ಮಂಗಳೂರು: ಸಾರ್ಟ್ ಸರ್ಕಿಟ್ ನಿಂದ ಉಂಟಾದ ಬೆಂಕಿಯಿಂದ ಕೊಟ್ಟಿಗೆ ಭಸ್ಮವಾದ ಘಟನೆ ಬೃಹ್ಮಾವರ ಸಮೀಪದ ಹಾರ್‌ಕೂರು ಬಂಡೀಮಠ ದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಬೆಂಕಿ ಕಂಡ ತಕ್ಷಣ ಸ್ಥಳೀಯರು ಕೊಟ್ಟಿಗೆಯಲ್ಲಿದ್ದ ದನಗಳಿಗೆ ಕಟ್ಟಿದ ಹಗ್ಗ ಕಡಿದು ಹಾಕಿದ್ದರಿಂದ ಜಾನುವಾರುಗಳು ಅಪಾಯಗದಿಂದ ಪಾರಾಗಿವೆ. ಬಂಡೀಮಠದ ಜಯರಾಂ ಪೂಜಾರಿ ಎಂಬವರ ಮನೆಗೆ ತಾಗಿಕೊಂಡೇ ಇರುವ ಕೊಟ್ಟಿಗೆಯಲ್ಲಿ ಗುರುವಾರ ರಾತ್ರಿ ೯:೩೦ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಕೊಟ್ಟಿಗೆಯಲ್ಲಿ ಸಂಗ್ರಹಿಸಿಡಲಾಗಿದ್ದ ತೆಂಗಿನ ಕಾಯಿ, ಒಣ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಗ್ರಾಮ ಲೆಕ್ಕಿಗ ಚೆಲುವರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಶೀಲಿ ಸಿದ್ದು, ಒಂದು ಲಕ್ಷ ರೂ. ನಷ್ಟವಾಗಿರ ಬಹುದು ಎಂದು ಅಂದಾಜಿಸಿದ್ದಾರೆ.

Posted in: Local News