ವಾಟ್ಸನ್ ಅಬ್ಬರಕ್ಕೆ ಕಂಗೆಟ್ಟ ಮಲಿಂಗಾ ವಾರ್ನ್ ಗೆ ಗೆಲುವಿನ ವಿದಾಯ

Posted on May 21, 2011

0


ಮುಂಬಯಿ: ತನ್ನ ತಂಡದ ಕಪ್ತಾನನ ಅಂತಿಮ ಪಂದ್ಯಕ್ಕೆ ವಾಟ್ಸನ್ ಸಿಡಿಲಬ್ಬರದ ಬ್ಯಾಟಿಂಗಿಗಿಂತ ಉತ್ತಮ ವಾದ ಉಡುಗೊರೆ ಬೇರೊಂದು ಸಿಗಲಿಕ್ಕಿಲ್ಲ. ವಾಟ್ಸನ್ ಆಲ್‌ರೌಂಡ್ ಆಟದಿಂದಾಗಿ ರಾಜಸ್ಥಾನ ರಾಯಲ್ಸ್ ತನ್ನ ಅಂತಿಮ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ವಿರುದ್ಧ ಹತ್ತು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ವಾಟ್ಸನ್ ಅಬ್ಬರದ ಆಟದಿಂದ ಇನ್ನೂ ಏಳು ಓವರ್ ಬಾಕಿ ಇರುವಂತೆ ರಾಜಸ್ಥಾನ ೧೩೪ ರನ್ ಮಾಡಿ ತವರಿ ನಲ್ಲೇ ಮುಂಬಯಿಗೆ ಆಘಾತ ನೀಡಿತು. ಮಲಿಂಗಾ ಸೇರಿದಂತೆ ಮುಂಬಯಿ ಬೌಲರ್‌ಗಳಿಗೆ ರಾಜ ಸ್ಥಾನದ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದಿರುವುದು ವಾಟ್ಸನ್ ಮತ್ತು ದ್ರಾವಿಡ್ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿ.

ಮಲಿಂಗಾ ಟಾರ್ಗೆಟ್ ಮಾಡಿದ ವಾಟ್ಸನ್ ನಾಲ್ಕು ಓವರ್‌ನಲ್ಲಿ ಸಿಡಿಸಿದ್ದು ೪೨ ರನ್. ಇದಾದ ಬಳಿಕ ದುಬಾರಿ ಯಾದ ಹರ್ಭಜನ್ ಓವರ್‌ನಲ್ಲಿ ಬಂದದ್ದು ೨೭ ರನ್. ಮುಂಬಯಿಯ ಬೌಲರ್‌ಗಳನ್ನು ಹೇಳಹೆಸರಿಲ್ಲದಂತೆ ಮೈದಾನದ ಮೂಲೆ ಮೂಲೆಗೆ ಅಟ್ಟಿದ ವಾಟ್ಸನ್ ಸಿಡಿಸಿದ್ದು ಆರು ಸಿಕ್ಸರ್ ಮತ್ತು ೯ ಬೌಂಡರಿಗಳು. ಕೇವಲ ೪೭ ಎಸೆತಗಳಲ್ಲಿ ಮಾಡಿದ ರನ್ ೮೯. ದ್ರಾವಿಡ್ ೩೨ ಎಸೆತಗಳಲ್ಲಿ ಆರು ಬೌಂಡರಿ ಸಹಿತ ೪೩ ರನ್ ಬಾರಿಸಿದರು.

ಮುಂಬಯಿ ಆರಂಭ ನಿರೀಕ್ಷೆ ಯಂತೆ ಇರಲಿಲ್ಲ. ಏಳು ರನ್ ಮಾಡು ವಷ್ಟರಲ್ಲಿ ಟಿ. ಸುಮನ್ ಪೆವಿಲಿಯನ್‌ನತ್ತ ಮುಖ ಮಾಡಿದರು. ಇದೇ ಮೊತ್ತಕ್ಕೆ ಮತ್ತೆ ಹತ್ತು ರನ್ ಸೇರಿಸುವಷ್ಟರಲ್ಲಿ ಮುಂಬಯಿಗೆ ಮತ್ತೊಂದು ಆಘಾತ ನೀಡಿದ ವಾಟ್ಸನ್, ೨ ರನ್ ಮಾಡಿದ ರಾಯುಡುವನ್ನು ಔಟ್ ಮಾಡಿದರು. ಆದರೆ ಇನ್ನೊಂದು ಬದಿಯಲ್ಲಿ ಆಡುತ್ತಿದ್ದ ಸಚಿನ್ ಜತೆ ಸೇರಿದ ರೋಹಿ ತ್ ಶರ್ಮಾ ತಂಡವನ್ನು ಆರಂಭಿಕ ಆಘಾತದಿಂದ ಸುಧಾರಿಸಲು ನೆರ ವಾದರು. ಸಚಿನ್ ಮತ್ತು ರೋಹಿತ್ ಜತೆಯಾಟ ಮುಂಬಯಿಗೆ ಅತ್ಯಗತ್ಯ ವಾಗಿದ್ದ ರನ್ ತಂದುಕೊಟ್ಟಿತು. ಸಚಿನ್ ೩೧ ರನ್ ಮಾಡಿ ನಿರ್ಗಮಿಸಿದಾಗ ಈ ಜತೆಯಾಟ ಮುರಿದುಬಿತ್ತು. ಇದರ ಬಳಿಕ ಶರ್ಮಾ ಮತ್ತು ಪೊಲಾರ್ಡ್ ಕೆಲವು ದೊಡ್ಡ ಹೊಡೆತಗಳನ್ನು ಬಾರಿಸಿ ತಂಡದ ಸ್ಕೋರ್ ಬೋರ್ಡ್‌ಗೆ ವೇಗ ನೀಡುತ್ತಿರುವಾಗಲೇ ೧೮ ಎಸೆತಗಳಲ್ಲಿ ೨೦ ರನ್ ಮಾಡಿದ ಪೊಲಾರ್ಡ್, ವಾಟ್ಸನ್ ಎಸೆತದಲ್ಲಿ ಬೌಲ್ಡ್ ಆದರು. ವೃತ್ತಿಪರ ಕ್ರಿಕೆಟಿನ ಅಂತಿಮ ಓವರ್ ಎಸೆದ ವಾರ್ನ್ ೫೮ ರನ್ ಮಾಡಿದ ಶರ್ಮಾರನ್ನು ಸ್ಟಂಪ್ ಮಾಡಿಸಿದರು. ರಾಜಸ್ತಾನ ಬೌಲರ್‌ಗಳು ಅಂತಿಮ ಮೂರು ಓವರ್‌ಗಳಲ್ಲಿ ಕರಾರುವ ಕ್ಕಾದ ಬೌಲಿಂಗ್ ಸಂಘಟಿಸಿ ರನ್‌ಗೆ ಕಡಿವಾಣ ಹಾಕಿದರು.

Posted in: Sports News