ಬಜರಂಗಿಗೆ ಸ್ಕೆಚ್: ಒಂಬತ್ತು ಸೆರೆ

Posted on May 21, 2011

0


ಮಂಗಳೂರು: ಬಜರಂಗ ದಳ ಕಾರ್ಯಕರ್ತನ ಕೊಲೆಗೆ ಸಂಚು ರೂಪಿಸಿ ಮಾರಕಾ ಯುಧ ದೊಂದಿಗೆ ಕಾಯುತ್ತಿದ್ದ ಒಂಬತ್ತು ಮಂದಿಯನ್ನು ಮಂಗ ಳೂರು ಗ್ರಾಮಾಂತರ ಪೊಲೀ ಸರು ಬಂಧಿ ಸಿದ್ದಾರೆ. ಬಂಧಿತ ರಿಂದ ಮಾರಕಾ ಯುಧ ಸಹಿತ ಎರಡು ವಾಹನ ಗಳನ್ನು ವಶಪ ಡಿಸಿಕೊಳ್ಳಲಾಗಿದೆ. ಬರ್ಕೆ ಠಾಣೆ ಯಲ್ಲಿ ಪ್ರಕರಣ ದಾಖ ಲಾಗಿದೆ.

ಎಂಪೈರ್ ಮಾಲ್‌ನ ಉಸ್ತುವಾರಿ ಯನ್ನು ನೋಡಿಕೊಳ್ಳುತ್ತಿದ್ದ ಹರೀಶ್ ಶೆಟ್ಟಿ ಹಾಗೂ ಸಿಟಿ ಸೆಂಟರ್‌ನ ಉಸ್ತು ವಾರಿಯನ್ನು ನೋಡಿಕೊಳ್ಳುತ್ತಿರುವ ಪದ್ದು ಯಾನೆ ಪದ್ಮರಾಜ್ ನಡುವೆ ವೃತ್ತಿ ವೈಷಮ್ಯ ಇದ್ದು, ಇದೇ ವಿಚಾರ ಕೊಲೆ ಯತ್ನದವರೆಗೆ ಮುಂದುವರಿ ದಿದೆಯಾದರೂ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಕೊಲೆ ಯೊಂದು ತಪ್ಪಿದಂತಾಗಿದೆ. ಬಜರಂಗದಳದ ಸಕ್ರಿಯ ಕಾರ್ಯ ಕರ್ತ, ಸಿಟಿ ಸೆಂಟರ್‌ನ ವ್ಯವಸ್ಥೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪದ್ದು ಯಾನೆ ಪದ್ಮರಾಜ್ ಎಂಬಾತನ ಕೊಲೆಗೆ ಸಂಚು ರೂಪಿಸಲಾಗಿದ್ದು, ಭಾನುವಾರ ಆತನ ಮನೆ ಬಳಿಯೇ ಹತ್ಯೆ ಮಾಡಲು ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದರೆ ಇದರ ಮೊದಲೇ ಪೊಲೀಸರು ಸುಳಿವನ್ನು ಪಡೆದು ಆರೋಪಿಗಳನ್ನು ಬಂಧಿಸಿದ ಕಾರಣ ಪದ್ಮರಾಜ್ ಅಪಾಯದಿಂದ ಪಾರಾಗಿದ್ದಾರೆ.

ಜಾತ್ಯತೀತ ಜನತಾ ದಳದ ಹರೀಶ್ ಶೆಟ್ಟಿ ಎಂಬಾತನೇ ಕೊಲೆ ಸಂಚಿನ ಸೂತ್ರಧಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಪರಮಾಪ್ತ ಸ್ನೇಹಿತರಾಗಿದ್ದ ಪದ್ಮರಾಜ್ ಮತ್ತು ಹರೀಶ್, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮುನಿಸು ಹೊಂದಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಪದೇ ಪದೇ ಜಗಳ ನಡೆಯುತ್ತಿತ್ತು.

ಮೂರನೇ ಪುಟಕ್ಕೆ

Posted in: Local News