ಕೊಂಪೆ ಬಿದ್ದ ಆಶ್ರಯ ಯೋಜನೆ ಕಟ್ಟಡ ಲೋಕಾಯುಕ್ತರ ಿಂದ ಪರಿಶೀಲನೆ

Posted on May 21, 2011

0


ಮಂಗಳೂರು: ಉಳ್ಳಾಲ ಒಂಭತ್ತು ಕೆರೆಯಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡು ಸ್ಥಳೀಯರ ವಿರೋಧದಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಪಾಳುಬಿದ್ದ ಆಶ್ರಯ ಯೋಜನೆ ಮನೆಗಳು ಕಳಪೆ ಕಾಮಗಾರಿಯದ್ದು ಎಂದು ಆರೋಪಿಸಿ ಸ್ಥಳೀಯರು ಲೋಕಾಯುಕ್ತರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಿನ್ನೆ ತಾಂತ್ರಿಕ ವಿಭಾಗ ದವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಉಳ್ಳಾಲ ಪುರಸಭೆ ವ್ಯಾಪ್ತಿಯ ಒಂಭತ್ತುಕೆರೆಯಲ್ಲಿ ೨೦೦೧ರಂದು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಡಿ ಪ್ರತಿ ಮನೆ ಕಾಮಗಾರಿಗೆ ರೂ ೩೦,೦೦೦ ಮಂಜೂರಾಗಿತ್ತು. ಅದರಂತೆ ೯.೫ ಎಕರೆ ಸ್ಥಳದಲ್ಲಿ ೩೯೦ ಆಶ್ರಯ ಮನೆಗಳನ್ನು ಹಂದಿ ಗೂಡಿನಂತೆ ನಿರ್ಮಿಸಲಾಗಿತ್ತು. ೨೦೦೨ರಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದರು. ಸಾವಿರಾರು ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರೂ ಕೆಲವರಿಗೆ ಮಾತ್ರ ಮನೆಗಳು ಮಂಜೂರಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬೆನ್ನಿಗೇ ಸ್ಥಳೀಯರು ಸ್ಥಳದಲ್ಲಿ ಪವಿತ್ರ ಕ್ಷೇತ್ರ ಗಳಿದ್ದು ಅವುಗಳ ಜಾಗಗಳನ್ನು ಕೆಡವಿ ನಿರ್ಮಿಸಲಾದ ಮನೆಗಳಿಂದ ಮಾಲಿನ್ಯ ಉಂಟಾಗುವುದೆಂಬ ನಿಟ್ಟಿನಲ್ಲಿ ನ್ಯಾಯಾ ಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರು.

ಹತ್ತು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯೆ ಕಳಪೆ ಕಾಮಗಾರಿಯೆಂದು ಹಿಂದಿನಿಂದಲೂ ಬಂದ ಆರೋಪಕ್ಕೆ ಪುಷ್ಠಿ ಎಂಬಂತೆ ಹಲವು ಮನೆಗಳು ಬಿರುಕು ಬಿಟ್ಟು ಕುಸಿದು ಬಿದ್ದಿದೆ.

ಈ ಬಗ್ಗೆ ಮತ್ತೆ ಸ್ಥಳೀಯರು ಕಾಮಗಾರಿಯಲ್ಲಿ ಅವ್ಯವಹಾರ ನಡೆ ದಿದೆ ಎಂದು ಆರೋಪಿಸಿ ಲೋಕಾ ಯುಕ್ತರಿಗೆ ದೂರು ನೀಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿ ನಿನ್ನೆ ಲೋಕಾ ಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿ ಶ್ರೀನಿವಾಸ್, ನಗರಪಾಲಿಕೆ ಕಿರಿಯ ಸಹಾಯಕ ಅಭಿಯಂತರ ನಿತ್ಯಾನಂದ ನೇತೃತ್ವದ ತಂಡ ಸ್ಥಳೀಯರ ಹೇಳಿಕೆ ಗಳನ್ನು ಸಂಗ್ರಹಿಸಿ ಕಟ್ಟಡಗಳ ಕಾಮ ಗಾರಿಯನ್ನು ಪರಿಶೀಲಿಸಿ ವರದಿಯನ್ನು ಸಂಗ್ರಹಿಸಿದೆ.

Advertisements
Posted in: Local News