ಕಾಮಿಕ್ ವರ್ಲ್ಡ್ ವಿರುದ್ಧ ಕ್ರಮ ಕೈಗೊಳ್ಳಲು ಕಾ ಂತಪುರಂ ಆಗ್ರಹ

Posted on May 21, 2011

0


ದೆಹಲಿ: ಪ್ರವಾದಿ(ಸ)ರ ಕಲ್ಪಿತ ಚಿತ್ರ ಪ್ರಕಟಿಸಿ ಪ್ರವಾದಿ(ಸ)ರ ನಿಂದನೆ ಗೈದಿರುವ ದೆಹಲಿಯ ಕಾಮಿಕ್ ವರ್ಲ್ಡ್ ಡೈಜೆಸ್ಟ್’ ಮ್ಯಾಗಝಿನ್‌ನ ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಆಗ್ರಹಿಸಿದ್ದಾರೆ.

ಅವರು ಸೋಮವಾರ(ಮೇ ೧೬) ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಮಿಕ್ ವರ್ಲ್ಡ್ ಮ್ಯಾಗಝಿನ್ ವಿರುದ್ಧ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಫ್ತಿ ಮುಹಮ್ಮದ್ ಮಿಯಾನ್ ಸಮರ್ ದಹ್ಲವಿ ಮುಂತಾದ ವಿದ್ವಾಂಸರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರವಾದಿ(ಸ)ರ ನಿಂದನೆ ಮಾಡಿರುವ ಕಾಮಿಕ್ ಮ್ಯಾಗ ಝಿನ್ ಆರ್‌ಎನ್‌ಐ ನೋಂದಣಿ ಯನ್ನು ರದ್ದುಗೊಳಿಸಬೇಕು. ಅದರ ಸಂಪಾದಕ ಗುಲ್ಶಾನ್ ರಾಯ್‌ರನ್ನು ಬಂಧಿಸಿ ಶಿಕ್ಷಿಸ ಬೇಕೆಂದು ಅವರಿಬ್ಬರೂ ಸರಕಾರವನ್ನು ಒತ್ತಾಯಿಸಿದರು.

ಪ್ರಸ್ತುತ ಪ್ರತಿಭಟನೆಯು ಜಗತ್ತಿಗೆ ಮಾನವೀಯತೆ, ಸಹೋದರತೆಯನ್ನು ಬೋಧಿಸಿರುವ ವಿಶ್ವ ಪ್ರವಾದಿ(ಸ) ರೊಂದಿಗಿನ ಪ್ರೀತಿಯ ಅಭಿವ್ಯಕ್ತಿಯೇ ಹೊರತು ಮುಸ್ಲಿಂ ಸಮುದಾಯವನ್ನು ಭಾವನಾತ್ಮಕಾವಾಗಿ ಉದ್ರೇಕಿಸುವುದಕ್ಕಲ್ಲ ಎಂದು ಪ್ರತಿಭಟನಕಾರರು ಒಕ್ಕೊ ರಳಿನಿಂದ ಸ್ಪಷ್ಟಪಡಿಸಿದರು. ದೆಹಲಿಯ ಡೈಮಂಡ್ ಪಬ್ಲಿಷಿಂಗ್ ಹೌಸ್ ಹೊರ ತರುವ ಕಾಮಿಕ್ ವರ್ಲ್ಡ್ ಡೈಜೆಸ್ಟ್ ಮ್ಯಾಗಝಿನ್‌ನ ಎಪ್ರಿಲ್ ೩೦ರ ಸಂಚಿಕೆ ಯಲ್ಲಿ ಪ್ರವಾದಿ(ಸ)ರ ಕಲ್ಪಿತ ಭಾವಚಿತ್ರ ಪ್ರಕಟಿಸಲಾಗಿತ್ತು. ಇದು ದೆಹಲಿಯಲ್ಲಿ ಮುಸ್ಲಿಮರ ವ್ಯಾಪಕ ಆಕ್ರೋಶಕ್ಕೆ ಗುರಿ ಯಾಗಿದ್ದರೂ ಈಗಲೂ ಮಾರುಕಟ್ಟೆ ಯಲ್ಲಿ ಈ ಸಂಚಿಕೆಯನ್ನು ಮಾರಾಟ ಮಾಡುತ್ತಿರುವುದರಿಂದ ಈ ಪ್ರತಿಭಟನೆ ಏರ್ಪಡಿಸಲಾಗಿತ್ತು.

ಎಂಎಸ್‌ಒ ಅಧ್ಯಕ್ಷ ಸೈಯದ್ ಮುಹಮ್ಮದ್ ಖಾದ್ರಿ,, ಖಾರಿ ಮುಹ ಮ್ಮದ್ ಮಿಯಾನ್ ಮಝ್ಹರಿ, ಈ ಸಂಬಂಧ ಜಾಮಿಯಾ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಅಮಾನುಲ್ಲ್ಹಾ ಖಾನ್, ಪೀರ್ ಝಾದಾ ಬಶೀರ್ ನಕ್ಷಬಂದಿ, ಮೌಲಾನಾ ಅಬ್ದುಲ್ ಖಾದಿರ್ ರಝ್ವಿ, ಆಲ್ ಇಂಡಿಯಾ ಉಲಮಾ ಮಷಾಇಖ್ ಬೋರ್ಡ್‌ನ ಕನ್ವೀನರ್ ಮೌಲಾನಾ ಅಹ್ಮದ್ ನಈಮಿ ಮುಂತಾದ ಉತ್ತರಭಾರತದ ವಿದ್ವಾಂಸರು ಹಾಗೂ ದೆಹಲಿ ಶಾಸಕ ಸುಹೈಬ್ ಇಖ್ಬಾಲ್ ಮುಂತಾದ ರಾಜಕೀಯ-ಸಾಮಾಜಿಕ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisements
Posted in: National News