ಉಡುಪಿ: ರಿಕ್ಷಾ ಚಾಲಕನ ಕೊಲೆ ಪ್ರಕರಣ ೨೨ ಮಂದಿಯ ಹ ೇಳಿಕೆ ಪಡೆಯಲು ನೋಟಿಸ್

Posted on May 21, 2011

0


ಉಡುಪಿ: ಉಪ್ಪೂರು ಸಮೀಪದ ಕೊಳಲಗಿರಿಯ ರಿಕ್ಷಾ ಚಾಲಕ ಸುಧಾಕರ (೩೧) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಡಿವೈಎಸ್ಪಿ ಜಯಂತ್ ವಿ. ಶೆಟ್ಟಿ ನೇತೃತ್ವದ ತಂಡ ತನಿಖೆ ಆರಂಭಿ ಸಿದ್ದು, ಶನಿವಾರ ಒಂದೇ ದಿನ ೨೨ ಮಂದಿಯ ಹೇಳಿಕೆ ಯನ್ನು ಪಡೆಯಲು ಸಂಬಂಧ ಪಟ್ಟವರನ್ನು ಕಚೇರಿಗೆ ನೋಟೀಸು ಮೂಲಕ ಕರೆದಿದ್ದಾರೆ.

ಬಡಾ ನಿಡಿಯೂರು ಗ್ರಾ.ಪಂ. ಅಧ್ಯಕ್ಷ ಬಿ.ಸುರೇಶ್ ಶೆಟ್ಟಿ ಹಾಗೂ ಉಪ್ಪೂರಿನ ಲಕ್ಷ್ಮೀ ಬಾರಿನ ಮಾಲಕ ಜಗನ್ನಾಥ ಸೇರಿದಂತೆ ೨೨ ಮಂದಿಯ ತಂಡದ ಹೇಳಿಕೆ ಯನ್ನು ಪಡೆಯಲು ಒಂದೇ ದಿನದಲ್ಲಿ ಸಾಧ್ಯವೇ ಎಂಬ ಪ್ರಶ್ನೆಗೆ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ರಿಕ್ಷಾ ಚಾಲಕ ಸುಧಾಕರನ ಮೃತದೇಹ ಜೂನ್ ೨೭, ೨೦೧೦ರಂದು ಮಲ್ಪೆ ಸಮುದ್ರ ಕಿನಾರೆಯ ಬಳಿ ಪತ್ತೆ ಯಾಗಿತ್ತು. ಪೊಲೀಸರು ಈ ಬಗ್ಗೆ ಶಂಕಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದರು. ಮೃತ ಸುಧಾಕರನ ತಾಯಿ ಶಾಂತ ಅವರು ನೀಡಿರುವ ದೂರಿನಲ್ಲಿ ಮೃತದೇಹ ಪತ್ತೆಯಾದ ದಿನದಂದು ಸುಧಾಕರನನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಬಾರ್‌ಗಳಲ್ಲಿ ಕಂಠಪೂರ್ತಿ ಮದ್ಯಪಾನ ಕುಡಿಸಿ ಮುಸ್ಸಂಜೆ ವೇಳೆ ನಡೆಯಲಾರದ ಸ್ಥಿತಿಯಲ್ಲಿ ಮಲ್ಪೆ ಬೀಚ್‌ಗೆ ಕರೆದೊಯ್ದು ಹತ್ಯೆ ಮಾಡಿರುವ ಬಗ್ಗೆ ತಿಳಿಸಿದ್ದರು. ನಾಟಕ ರಂಗದಲ್ಲಿ ಸಕ್ರಿಯರಾಗಿದ್ದ ಸುಧಾಕರ ಬ್ರಾಹ್ಮಣ ಹುಡುಗಿಯ ಜೊತೆ ಒಡನಾಟ ಹೊಂದಿದ್ದರೆಂಬ ಆರೋಪದಲ್ಲಿ ಹತ್ಯೆ ನಡೆದಿದೆಯೆಂಬ ಆರೋಪವನ್ನೂ ಮಾಡಿದ್ದರು. ಈ ಬಗ್ಗೆ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ ಇವರು ಆರೋಪಿಗಳನ್ನು ರಕ್ಷಣೆ ಮಾಡಿದ್ದಾರೆಂದು ಶಾಂತ ಅವರು ಆರೋಪಿಸಿ ಐಜಿಪಿ, ಡಿಜಿಪಿ, ಮುಖ್ಯಮಂತ್ರಿ, ಗೃಹಸಚಿವರು ಮೊದಲಾದವರಿಗೆ ಹೆಚ್ಚಿನ ತನಿಖೆ ಮೂರನೇ ಪುಟಕ್ಕೆ

Advertisements
Posted in: Local News