ಈಜಾಡಲು ಹೋದವರು ನೀರುಪಾಲು

Posted on May 20, 2011

0


ಕುಂದಾಪುರ: ರಜೆಯಲ್ಲಿದ್ದ ಖುಷಿಯಲ್ಲಿ ನದಿಯಲ್ಲಿ ಈಜಾಡಲು ಹೋದ ವಿದ್ಯಾರ್ಥಿಗಳಿಬ್ಬರು ನೀರುಪಾಲಾದ ಘಟನೆ ತಾಲೂಕಿನ ಬಳ್ಕೂರು ಗ್ರಾಮದ ಗುತ್ತಿಕೆರೆ ಎಂಬಲ್ಲಿ ಗುರುವಾರ ಸಂಭವಿಸಿದೆ.

ಕೋಟೇಶ್ವರ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಬಳ್ಕೂರು ಶಶಿಕಾಂತ ರಾವ್ ಅವರ ಪುತ್ರ ಪ್ರೀತೇಶ್(೧೮) ಮತ್ತು ಬಸ್ರೂರು ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕರುಣಾಕರ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ(೧೭) ನೀರು ಪಾಲಾದವರು. ಪ್ರಜ್ಞಲ್‌ನ ಮೃತದೇಹ ಸಂಜೆ ನದಿಯಲ್ಲಿ ಪತ್ತೆಯಾಗಿದೆ.

ಗುರುವಾರ ಬೆಳಿಗ್ಗೆ ಪ್ರೀತೇಶ್ ಮತ್ತು ಪ್ರಜ್ವಲ್ ಜಂಬೂನದಿಯ ದಡದಲ್ಲಿ ಮೊಬೈಲ್ ಹಾಗೂ ಬಟ್ಟೆನ್ನು ನದಿಯ ದಡದಲ್ಲಿರಿಸಿ ಈಜಲು ನೀರಿಗಿಳಿದಿದ್ದರು. ಮಧ್ಯಾಹ್ನ ಕಳೆದರೂ ಹುಡುಗರು ಮನೆಗೆ ಬಾರದೇ ಇರುವುದನ್ನು ಗಮನಿಸಿ ಗಾಬರಿಗೊಂಡ ಮನೆಯವರು ಮೊಬೈಲ್‌ಗೆ ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹುಡುಗರನ್ನು ಹುಡುಕಲು ಆರಂಭಿಸಿದರು. ಈಜಲು ಹೋಗುತ್ತೇವೆಂದು ಸ್ನೇಹಿತನೋರ್ವನಲ್ಲಿ ಹೇಳಿ ಹೋದದ್ದರಿಂದ ನದಿಯ ಬಳಿ ಬಟ್ಟೆ ಹಾಗೂ ಮೊಬೈಲ್ ಕಂಡು ಬಂದ ಹಿನ್ನೆಲೆಯಲ್ಲಿ ಹುಡುಕಾಟವನ್ನು ತೀವ್ರಗೊ ಳಿಸಲಾಯಿತು. ಬೆಳಿಗ್ಗಿನಿಂದ ಸಂಜೆಯ ತನಕ ಈಜಲು ಹೋದ ವಿದ್ಯಾರ್ಥಿಗಳು ನಾಪತ್ತೆ ಯಾದುದರಿಂದ ನದಿಯಲ್ಲಿ ಸಿಲುಕಿ ಸಾವನ್ನಪ್ಪಿರ ಬಹುದೆಂದು ಶಂಕಿಸಲಾಗಿತ್ತು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಕುಂದಾ ಪುರದ ಅಗ್ನಿಶಾಮಕದಳ, ಪೊಲೀಸರು ನೀರು ಪಾಲಾದ ವಿದ್ಯಾರ್ಥಿಗಳ ಶೋಧಕ್ಕೆ ತೊಡಗಿದರು.

Posted in: Local News