ಮನೆಯಿಂದ ನಗ-ನಗದು ಕಳವು

Posted on May 20, 2011

0


ಮಂಗಳೂರು: ಮನೆಮಂದಿ ಹೊರಹೋಗಿದ್ದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ರೂ. ೧.೭೫ ಲಕ್ಷ ಬೆಲೆಬಾಳುವ ಚಿನ್ನ ಹಾಗೂ ನಗದನ್ನು ದೋಚಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿದೇಶದಲ್ಲಿ ಉದ್ಯೋಗ ಹೊಂದಿ ರುವ ಅಹಮ್ಮದ್ ಬಾವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.

ಬುಧವಾರ ಮಧ್ಯಾಹ್ನದಿಂದ ನಿನ್ನೆ ಬಳಗ್ಗಿನ ನಡುವೆ ಕಳ್ಳತನ ನಡೆದಿದ್ದು, ಮನೆಮಂದಿ ಮನೆಗೆ ವಾಪಸ್ಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ವಿದೇಶದಲ್ಲಿರುವ ಅಹಮ್ಮದ್ ಬಾವಾರವರ ಮನೆಯಲ್ಲಿ ಪತ್ನಿ ಹಾಗೂ ನಾಲ್ಕು ಮಕ್ಕಳಿದ್ದು, ಘಟನೆ ಸಂದರ್ಭ ಪತ್ನಿ ತನ್ನ ನಾಲ್ಕು ಮಕ್ಕಳೊಂದಿಗೆ ಮಂಜೇಶ್ವರ ಕುಂಜ ತ್ತೂರಿನ ತಾಯಿ ಮನೆಗೆ ತೆರಳಿದ್ದರು. ಮುಂಬಾಗಿಲ ಬೀಗ ಒಡೆದು ಒಳನುಗ್ಗಿ ರುವ ಕಳ್ಳರು ೧೦ ಪವನ್ ಚಿನ್ನ ಹಾಗೂ ೨೫ ಸಾವಿರ ರೂ ನಗದು ದೋಚಿ ದ್ದಾರೆ.

ಕೆಲ ಸಮಯದಿಂದ ಈ ಭಾಗದಲ್ಲಿ ಕಳ್ಳತನ ನಡೆಯುತ್ತಲೇ ಇದ್ದು, ಆದರೆ ಕಳ್ಳರ ಬಂಧನವಾಗದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisements
Posted in: Local News