ಮಣ್ಣಗುಡ್ಡ ಕೊಲೆ ಪ್ರಕರಣ: ಆರೋಪಿ ಬಂಧನ

Posted on May 20, 2011

0


ಮಂಗಳೂರು: ಮಣ್ಣಗುಡ್ಡ ಕೆಇಬಿ ಬಳಿಯ ಮೈದಾನದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬರ್ಕೆ ಠಾಣಾ ಪೊಲೀಸರು ಯಶಸ್ವಿಯಾ ಗಿದ್ದು ನಿನ್ನೆ ಆರೋಪಿಯನ್ನು ಬಂಧಿಸಿ ಬಳಿಕ ನ್ಯಾಯಾಲ ಯಕ್ಕೆ ಹಾಜರು ಪಡಿಸಿದ್ದಾರೆ.

ಬಲ್ಲಾಳ್‌ಭಾಗ್ ಭಗವತಿ ದೇವಸ್ಥಾನ ಕಂಪೌಂಡ್ ನಿವಾಸಿ ಮನೀಶ್ ಕುಮಾರ್(೨೩) ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ನ್ಯಾಯಾಲಯ ಈತನಿಗೆ ಜೂನ್ ಒಂದರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಲೆಗೀಡಾದ ಸಂದಿವೇಲು ಮತ್ತು ಮನೀಶ್ ಕುಮಾರ್ ಕ್ಲಾಸ್‌ಮೇಟ್‌ಗಳಾಗಿದ್ದು ಸ್ನೇಹಿತರೂ ಆಗಿದ್ದಾರೆ. ಇವರ ನಡುವೆ ಉದ್ಭವಿಸಿದ ಬೆಟ್ಟಿಂಗ್ ಹಣದ ವಿವಾದವೇ ಕೊಲೆಗೆ ಕಾರಣ ಎಂದು ಮನೀಶ್ ತಿಳಿಸಿದ್ದಾನೆ.

ಐಪಿಎಲ್ ಮ್ಯಾಚ್‌ಗೆ ಸಂಬಂಧಿಸಿ ಸಂದಿವೇಲು, ಮನೀಶ್ ಬಳಿ ಬೆಟ್ಟಿಂಗ್ ಹಾಕಿ ಸೋತಿದ್ದ. ಇದರಿಂದಾಗಿ ಸುಮಾರು ನಾಲ್ಕು ಸಾವಿರ ರೂಪಾಯಿ ಹಣವನ್ನು ಸಂದಿವೇಲು ಮನೀಶ್‌ಗೆ ನೀಡಬೇಕಾಗಿತ್ತು. ಆದರೆ ತುಂಬಾ ದಿನವಾಗಿದ್ದರೂ ಆತ ಹಣ ನೀಡಿರಲಿಲ್ಲ. ಮನೀಶ್ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಕಾರಣ ಮಂಗಳವಾರ ಹಣ ನೀಡುವುದಾಗಿ ಸಂದಿವೇಲು ಒಪ್ಪಿಕೊಂಡಿದ್ದ. ಆದರೆ ಆತನಿಗೆ ಹಣ ಹೊಂದಿಸಲು ಸಾಧ್ಯವಾಗಿಲ್ಲ. ಇದೇ ಮಾತನ್ನೂ ಆತ ಮನೀಶ್‌ಗೆ ತಿಳಿಸಿದಾಗ ಕೂತು ಮಾತನಾಡೋಣ ಎಂದು ಸಂದಿವೇಲುನನ್ನು ಕೆಇಬಿ ಬಳಿಯ ಮೈದಾನಕ್ಕೆ ಕರೆಸಿಕೊಂಡಿದ್ದ ಮನೀಶ್. ಇಲ್ಲಿ ಇಬ್ಬರೂ ತುಂಬಾ ಹೊತ್ತು ಮಾತನಾಡಿದ್ದರು. ಇದೇ ವೇಳೆ ನೀರು ಬೇಕು ಎಂದು ಕೇಳಿದ್ದ ಸಂದಿವೇಲುವಿಗೆ ಮನೀಶ್ ನೀರನ್ನೂ ತಂದುಕೊಟ್ಟಿದ್ದ ಬಹುಷ ಇದು ಆತನ ಕೊನೆಯ ನೀರು ಎಂದು ಇಬ್ಬರೂ ಅಂದುಕೊಂಡಿರಲಿಲ್ಲ.

ಇಬ್ಬರೂ ಮಾತನಾಡುತ್ತಿರುವಾಗಲೇ ಮನೀಶ್ ಹಣ ನೀಡುವಂತೆ ಒತ್ತಡ ಹಾಕಿದ್ದ ಈ ವೇಳೆ ೩೦೦ ನೀಡಿದ ಸಂದಿವೇಲು ಉಳಿದ ಹಣ ಮುಂದೆ ನೀಡುವುದಾಗಿ ತಿಳಿಸಿದಾಗ ಆಕ್ರೋಶಗೊಂಡ ಮನೀಶ್ ಕುಮಾರ್ ಸಂದಿವೇಲುಗೆ ಹೊಡೆದಿದ್ದ, ಆಗ ಸಂದಿವೇಲು ಮೈದಾನದಲ್ಲಿ ರಾಶಿ ಹಾಕಿದ್ದ ಪೈಪ್‌ಗಳ ನಡುವೆ ಓಡಿ ತಪ್ಪಿಸಿಕೊಂಡಿದ್ದ. ಅಲ್ಲಿಗೂ ಬೆನ್ನಟ್ಟಿದ ಮನೀಶ್ ಸಂದಿವೇಲುನ ಅಂಗಿ ಮೂರನೇ ಪುಟಕ್ಕೆ

Advertisements
Posted in: Local News