ಪ್ರಿಯತಮೆಗಾಗಿ ಹೇಬಿಯಸ್?

Posted on May 20, 2011

0


ಮಂಗಳೂರು: ಪ್ರಿಯತಮೆಗಾಗಿ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಮಲಗಿ ರುವ ಯುವಕ ಈಗಲೂ ಆಕೆಯೇ ತನಗೆ ಬೇಕೆಂದು ಪಟ್ಟು ಹಿಡಿದಿದ್ದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾನೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.

ಕಲ್ಲಾಪು ನಿವಾಸಿ ಅಬ್ದುಲ್ ರಝಾಕ್ ಎಂಬವರ ಮಗಳು ಸಭಾಝ್ ಮತ್ತು ಫಳ್ನೀರ್‌ನ ಹಮೀದ್ ಎಂಬವರ ಮಗ ಮನ್ಸೂರ್ ಕಳೆದ ಮೂರುವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಒಂದೇ ಸಮುದಾಯದವರಾಗಿದ್ದರೂ ಅವರ ಒಂದುಗೂಡುವಿಕೆಗೆ ಅಂತಸ್ತು ಅಡ್ಡಿಯಾಗಿತ್ತು. ಇದೇ ಕಾರಣದಿಂದ ಕಳೆದ ವಾರ ಇಬ್ಬರೂ ಮನೆಯಿಂದ ಪಲಾಯನಗೈದಿದ್ದರು.

ಇದರಿಂದ ಹತಾಶಗೊಂಡ ರಝಾಕ್ ಅವರು ಮದುವೆ ಮಾಡುವ ಭರವಸೆ ನೀಡಿ ಜೋಡಿಯನ್ನು ಚಾಣಾಕ್ಷತನದಿಂದ ಕರೆಸಿಕೊಂಡಿ ದ್ದರು. ಧಾರ್ಮಿಕ ಮುಖಂಡರು ಮತ್ತು ವಕೀಲರ ಮುಂದೆ ನಡೆದ ರಾಜಿ ಸಂಧಾನದಲ್ಲಿ ೨೨ನೇ ತಾರೀಕಿಗೆ ಮದುವೆಗೆ ದಿನ ನಿಗದಿಪಡಿಸಿದ್ದ ರಝಾಕ್ ಯುವತಿಗೆ ಪಾಸ್‌ಪೋರ್ಟ್ ಮಾಡಿಸಿ ವಿದೇಶದ ವಿಮಾನ ಹತ್ತಿಸಲು ತರಾತುರಿಯ ಕ್ರಮಕೈಗೊಂಡಿದ್ದರು.

ಮೂರನೇ ಪುಟಕ್ಕೆ

Advertisements
Posted in: Local News