ಪೊಲೀಸರಿಂದ ಖಾಸಗಿ ವಾಹನ ಚಾಲಕ-ಮಾಲಕರಿಗೆ ವಂಚನೆ

Posted on May 20, 2011

0


ಕಾಸರಗೋಡು: ಕೇರಳದಲ್ಲಿ ವಿಧಾನಸಭಾ ಚುನಾವಣೆ, ಮತಎಣಿಕೆ ಮುಗಿದಿದ್ದು, ಹೊಸ ಸರಕಾರ ಅಧಿಕಾರಕ್ಕೇರಿದೆ. ಜಯಿಸಿದ ಮಂದಿ ಹರ್ಷದಿಂದಿರುವಾಗ ಪರಾಭವ ಹೊಂದಿದವರು ಅದರ ಕಾರಣಗಳ ಬಗೆಗಿನ ಅಧ್ಯಯನದಲ್ಲಿ ನಿರತರಾಗಿ ದ್ದಾರೆ. ಆದರೆ ಇವರ ನಡುವೆ ಚುನಾವಣೆ ಕರ್ತವ್ಯಕ್ಕಾಗಿ ಅತ್ತಿಂದಿತ್ತ ವಾಹನ ಚಲಾಯಿಸಿದ್ದ ಜಿಲ್ಲೆಯ ೧೨೦ ರಷ್ಟು ಮಂದಿ ಈ ಬಗ್ಗೆ ಸಿಗಬೇಕಾದ ಬಾಡಿಗೆ ಹಣ ದೊರೆಯದೆ ಪೇಚಿಗೆ ಸಿಲುಕುವಂತಾಗಿದ್ದಾರೆ.

ಚುನಾವಣೆ ಕರ್ತವ್ಯಗಳಿಗೆ ಜಿಲ್ಲೆಯಲ್ಲಿ ನಿಯೋಜಿಸಲ್ಪಟ್ಟ ಹೆಚ್ಚುವರಿ ಪೊಲೀಸ್ ಸಂಚಾರಕ್ಕೆ ೧೨೦ ಖಾಸಗಿ ವಾಹನಗಳನ್ನು ಸೇನೆ ಚಾಲಕನ ಸಹಿತ ಬಾಡಿಗೆಗೆ ಪಡೆದು ಉಪಯೋಗಿಸಿತ್ತು. ಇವುಗಳಲ್ಲಿ ಮಿಕ್ಕ ವಾಹನಗಳು ಪ್ಯಾಟ್ರಲ್ ಆಗಿ ಬಳಸಲ್ಪಟ್ಟಿತ್ತು. ಪ್ಯಾಟ್ರ ಲಿಂಗ್ ಡ್ಯೂಟಿಯಲ್ಲಿ ವಾಹನವನ್ನು ಎಲ್ಲೂ ನಿಲ್ಲಿಸುವಂತಿಲ್ಲ. ಇದರಿಂದಾಗಿ ಹೆಚ್ಚಿನ ವಾಹನಗಳು ಚುನಾವಣೆ ಸಂಚಾರದ ನಾಲ್ಕು ದಿನಗಳಲ್ಲಿ ತಲಾ ೧೨೦೦ ಕಿ.ಮೀ ದೂರ ಚಲಿಸಿತ್ತು.

ಚುನಾವಣೆ ಕರ್ತವ್ಯಕ್ಕಾಗಿ ಸಂಚರಿಸಿದ ವಾಹನಗಳ ಬಾಡಿಗೆ ಮಂಜೂರು ಮೂರನೇ ಪುಟಕ್ಕೆ

Advertisements
Posted in: Special Report