ಕಾಂಗ್ರೆಸ್ ಸಂಚಿನ ವಿರುದ್ಧ ತೆರೆದ ಜೀಪಿನಲ್ಲಿ ಯಡ್ಡಿ ರಾಜ್ಯಾದ್ಯಂತ ಪ್ರವಾಸ

Posted on May 20, 2011

0


ಬೆಂಗಳೂರು: ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು ನಡೆದಿದೆ ಎಂಬ ಅನುಮಾನ ದಿಂದ ಬಿಜೆಪಿ ಉಗ್ರ ಚಳುವಳಿಗೆ ಮುಂದಾಗಿದೆ. ಜೂನ್ ಎರಡರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಸಲು ಅನುಮತಿ ನೀಡದ ರಾಜ್ಯ ಪಾಲರ ಕ್ರಮದ ಹಿಂದೆ ಸರ್ಕಾರವನ್ನು ವಜಾ ಮಾಡುವ ಸಂಚು ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಭಾರೀ ಹೋರಾಟ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ.

ನಗರದ ಎಂಜಿ ರಸ್ತೆಯಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆಯ ಬಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ. ಇದರ ಬೆನ್ನಲ್ಲೇ ಯಡಿಯೂರಪ್ಪ ತೆರೆದ ಜೀಪಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ನಾಯಕರು ನಡೆಸಿದ ಸಂಚನ್ನು ಜನರಿಗೆ ತಿಳಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಯವರೇ ಚಳುವಳಿ ಮುಂಚೂಣಿಯನ್ನು ವಹಿಸಿಕೊಂಡಿರುವುದರಿಂದ ಪೊಲೀಸ್ ಅಧಿಕಾರಿಗಳೇ ಅವರ ಪ್ರವಾಸದ ಮಾರ್ಗ ಹಾಗೂ ಅಗತ್ಯವಾದ ವಾಹನ ಸಿದ್ಧತೆ ನಡೆಸಿದ್ದಾರೆ.

ನಮ್ಮ ಸರ್ಕಾರಕ್ಕೆ ಬಹುಮತ ಇದೆ ಎಂಬುದನ್ನು ರಾಷ್ಟ್ರಪತಿ ಭವನದ ಮುಂದೆ ಪೆರೇಡ್ ಮಾಡುವ ಮೂಲಕ ಸಾಬೀತು ಮಾಡಿದ್ದೇವೆ. ಪ್ರಧಾನಿಗಳಿಗೆ ವಿವರಿಸಿದ್ದೇವೆ.ಅವರೂ ಅಸಾಂವಿಧಾನಿಕವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದರು.ಆದರೆ ಇದುವರೆಗೂ ರಾಜ್ಯಪಾಲರು ವಿಧಾನಮಂಡಲ ಅಧಿವೇಶನ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements
Posted in: Special Report