ಕಬ್ಬಿಣ ಮೈಗಂಟಿಸುವ ಆಯಸ್ಕಾಂತ ಕುಟುಂಬ!

Posted on May 20, 2011

0


ನವದೆಹಲಿ: ಪ್ರತಿಯೊಬ್ಬ ವ್ಯಕ್ತಿ ಯಲ್ಲಿ ಏನಾದರೊಂದು ವಿಶೇಷ ಗುಣ ಗಳು ಇದ್ದೇ ಇರುತ್ತದೆ. ಅದನ್ನು ಗುರು ತಿಸಿ ಆ ಪ್ರತಿಭೆ ಅಥವಾ ವಿಶೇಷತೆಗೆ ಸಾಣೆ ಹಚ್ಚಿದರೆ ಮಾತ್ರ ಅಂತಹ ವಿಶೇಷ ಪ್ರತಿಭೆಗಳು ಹೊರಜಗತ್ತಿಗೆ ತಿಳಿಯುತ್ತದೆ. ಮಲೇಶಿಯಾದ ಒಂದು ಕುಟುಂಬದ ವ್ಯಕ್ತಿಗಳ ದೇಹ ದಲ್ಲಿ ಆಯ ಸ್ಕಾಂತದ ಅಂಶ ಕಂಡು ಬಂದ್ದಿದ್ದು, ಇದು ಎಲ್ಲರನ್ನು ನಿಬ್ಬೆರಗಾಗಿಸಿದೆ.

ಮಲೇಶಿಯಾದ ಲೀವೂ ಥೋ ಎನ್ನುವಾತನ ದೇಹದಲ್ಲಿ ಆಯಸ್ಕಾಂ ತದ ಅಂಶವಿದೆ. ಇದರಲ್ಲಿ ಆತ ಕಬ್ಬಿ ಣದ ವಸ್ತುಗಳನ್ನು ಅಂಟಿಸಿಕೊಂಡು ಭಾರವಾದ ವಸ್ತುಗಳನ್ನು ಎತ್ತುತ್ತಾನೆ. ಇಷ್ಟು ಮಾತ್ರವಲ್ಲದೆ ಆತನ ಮಗ ಹಾಗೂ ಮೊಮ್ಮಗನ ದೇಹದಲ್ಲಿ ಕೂಡ ಆಯಸ್ಕಾಂತದ ಅಂಶಗಳಿವೆ. ಲೀವೊ ಥೋ ಚರ್ಮದಲ್ಲಿರುವ ಹೀರಿಕೊ ಳ್ಳುವ ಅಂಶದಿಂದಾಗಿ ಈ ಗುಣ ಬಂದಿದೆ ಎಂದು ಮಲೇಶಿಯಾದ ಟೆಕ್ನಾಲಜಿ ಯೂನಿವರ್ಸಿಟಿಯ ಪ್ರೊಪೆಸರ್ ಮೊಹಮ್ಮದ್ ಅಮೀನ್ ಅಲಿಯಾಸ್ ತಿಳಿಸಿದ್ದಾರೆ.

ಮೊಹಮ್ಮದ್ ಅಮೀನ್ ಇದರ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಇದು ಯಾವುದೇ ಪವಾಡವಲ್ಲ. ಇದ ರಿಂದಾಗಿ ಅವರ ಮಗ ಹಾಗೂ ಇಬ್ಬ ರು ಮೊಮ್ಮಕ್ಕಳಿಗೆ ಇದೇ ರೀತಿಯ ಗುಣ ಬಂದಿದೆ ಎಂದು ತಿಳಿಸಿದ್ದಾರೆ.

Advertisements
Posted in: National News