ಬಾಲಕಿಗೆ ಪೀಡನೆ: ಓರ್ವನ ಬಂಧನ

Posted on May 19, 2011

0


ಮಂಗಳೂರು: ಹನ್ನೊಂದರ ಹರೆಯದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ವ್ಯಕ್ತಿಯೊಬ್ಬ ಕೀಟಲೆ ನೀಡಿದ ಪರಿಣಾಮ ಬಾಲಕಿ ಆಸ್ಪತ್ರೆಗೆ ದಾಖಲಾದ ಘಟನೆ ಕಾಞಂಗಾಡು ವ್ಯಾಪ್ತಿಯಲ್ಲಿ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದೇರ ಪೊಲೀಸರು ಒಬ್ಬನನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿದ್ಯಾರ್ಥಿನಿಯನ್ನು ಇಲ್ಲಿನ ಪುಲಿಯಂಗಳ ಕಾಲೋನಿ ನಿವಾಸಿ ಐದನೇ ತರಗತಿಯಲ್ಲಿ ಓದುತ್ತಿದ್ದು ಕೀಟಲೆಗೊಳಗಾದ ಬಾಲಕಿಯಾಗಿದ್ದಾಳೆ. ಎರಡು ದಿನಗಳ ಹಿಂದೆ ಬಾಲಕಿಗೆ ತೀವ್ರ ಜ್ವರ ಬಾಧಿಸಿದ್ದು ತಕ್ಷಣ ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಮನೆಗೆ ಕೊಂಡೊಯ್ದರು ಜ್ವರ ಉಲ್ಬಣಿಸಿದ ಪರಿಣಾಮ ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾಯಿತು. ವೈದ್ಯರು ಹೆಚ್ಚಿನ ತಪಾಸಣೆಗೊಳಪಡಿಸಿದಾಗ ಬಾಲಕಿ ಪೀಡನೆಗೊಳಗಾದ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಒಬ್ಬನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಬೈಕ್-ರಿಕ್ಷಾ ಢಿಕ್ಕಿ: ಗಾಯ : ಆಟೋ ರಿಕ್ಷಾ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಸವಾರ ತೀವರರ ಗಾಯವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಕುಂದಾಪುರದ ಕೋಟಾ ಅಮೃತೇಶ್ವರಿ ದೇವಸ್ಥಾನದ ಕ್ರಾಸ್ ಬಳಿ ನಡೆದಿದೆ. ಗಾಯಗೊಂಡ ಯುವಕನನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದ್ದು ಕೋಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Posted in: Local News