ಜೈಲಿಗೆ ದಾಳಿ: ಮೊಬೈಲ್, ಗಾಂಜಾ ವಶ

Posted on May 19, 2011

0


ಮಂಗಳೂರು: ಎಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೀಸರ ತಂಡ ಬುಧವಾರ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿ ಕೈದಿಗಳ ಬಳಿ ಇದ್ದ ಎರಡು ಮೊಬೈಲ್ ಹಾಗೂ ಮೂರು ಗಾಂಜಾದ ಪೊಟ್ಟಣಗಳನ್ನು ವಶಪಡಿಸಿಕೊಂಡಿದೆ. ಜೈಲಿನ ಒಳಗೆ ಗಾಂಜಾ ಹಾಗೂ ಮೊಬೈಲ್ ಹೇಗೆ ಬಂದಿತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಜೈಲಿನ ಸಿಬ್ಬಂದಿ ಹೇಳುವ ಪ್ರಕಾರ ನಗರದ ಮಧ್ಯದಲ್ಲಿರುವ ಜೈಲಿಗೆ ಸಾಕಷ್ಟು ರಕ್ಷಣಾ ಸಿಬ್ಬಂದಿ ಇಲ್ಲ. ಕೈದಿಗಳಿಗೆ ಬೇಕಾದ ವಸ್ತುಗಳನ್ನು ಅವರಿಗೆ ಸಂಬಂಧ ಪಟ್ಟವರು ರಸ್ತೆ ಬದಿಯಿಂದ ಕಂಪೌಂಡ್‌ನ ಒಳಗೆ ಕಲ್ಲು ಅಥವಾ ಭಾರದ ವಸ್ತುವಿಗೆ ಕಟ್ಟಿ ಬಿಸಾಡಿ ಹೋಗುತ್ತಾರೆ. ಎಲ್ಲ ಸಮಯದಲ್ಲೂ ಎಲ್ಲೆಡೆಯಲ್ಲೂ ಕಣ್ಗಾ ವಲು ಇಡಲು ಸಿಬ್ಬಂದಿ ಕೊರತೆಯಿಂದ ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಸಾಹಾಯಕತೆ ತೋಡಿಕೊಳ್ಳುತ್ತಾರೆ.

ಪತೀ ತಿಂಗಳೂ ಪೊಲೀಸರಿಂದ ತಪಾಸಣೆ ನಡೆಸಬೇಕೆಂದು ಸರಕಾರದ ಸುತ್ತೋಲೆಯೇ ಇದೆ. ಅದರಂತೆ ಈ ಹಿಂದೆ ಕೂಡ ನಾವೇ ಪೊಲೀಸರನ್ನು ಕರೆದು ತಪಾಸಣೆ ನಡೆಸಿದ್ದೆವು. ನಿನ್ನೆ ಕೂಡ ಇಂತಹದ್ದೆ ತಪಾಸಣೆ ನಡೆದಿದೆ ಎಂದು ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿಂದೆ ದಾಳಿ ನಡೆಸಿದಾಗಲೂ ಮೊಬೈಲ್ ಹಾಗೂ ಗಾಂಜಾ ಪತ್ತೆ ಯಾಗಿತ್ತು ಎಂಬುದು ಗಮನಿಸಬೇಕಾದ ಅಂಶ.

ಕಲ್ಮಾಡಿ: ವೃದ್ಧ ನೇಣಿಗೆ ಶರಣು

ಮಂಗಳೂರು: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿ-ಬಿಲ್ಲುಗುಡ್ಡೆ ನಿವಾಸಿ ಸೀತಾರಾಮ ಅಡಿಗ(೭೨) ನಿನ್ನೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮದುವೆ ಮಾಡಿಕೊಳ್ಳದೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Posted in: Special Report