ವ್ಯಕ್ತಿ ನೇಣಿಗೆ ಶರಣು

Posted on May 19, 2011

0


ಪಡುಬಿದ್ರಿ: ಶ್ವಾಸಕೋಶದಲ್ಲಿ ಗಡ್ಡೆ ಬೆಳೆದು ವಿಪರೀತ ನೋವು ಅನುಭವಿ ಸುತ್ತಿದ್ದ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪು ಠಾಣಾ ವ್ಯಾಪ್ತಿಯ ಮಲ್ಲಾರು ಎಂಬಲ್ಲಿ ನಡೆದಿದೆ. ಮಲ್ಲಾರು ಗ್ರಾ. ಪಂ. ಬಳಿಯ ನಿವಾಸಿ ಧರ್ಮರಾಜ್ ಅವರಿಗೆ ಕೆಲ ಸಮಯದ ಹಿಂದೆ ಶ್ವಾಸಕೋಶದಲ್ಲಿ ಗಡ್ಡೆ ಬೆಳೆದು ವಿಪರೀತ ನೋವು ಅನುಭವಿಸುತ್ತಿದ್ದರು. ಹಲವಾರು ಸಮ ಯದಿಂದ ಔಷಧಿ ಮಾಡಿದ್ದರೂ ರೋಗ ಗುಣಮುಖ ವಾಗಿಲ್ಲ. ಅಲ್ಲದೆ ತೀವ್ರವಾದ ಆರ್ಥಿಕ ಅಡಚಣೆಯ ಲ್ಲಿಯೂ ಇದ್ದರು ಎನ್ನಲಾಗಿದೆ.

ಎರಡು ದಿನದ ಹಿಂದೆ ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾಗಿ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ

Advertisements
Posted in: Special Report