ವಿಟ್ಲ: ರದ್ದಾದ ಸಲಫಿ ಸಮಾವೇಶ

Posted on May 19, 2011

0


ವಿಟ್ಲ: ಸೌತ್ ಕರ್ನಾಟಕ ಮೂವ್‌ಮೆಂಟ್ ವಿಟ್ಲ ಘಟಕ ಇದರ ವತಿಯಿಂದ ಕಂಬಳಬೆಟ್ಟು ಜಂಕ್ಷನ್‌ನಲ್ಲಿ ಗುರುವಾರ ಸಲಫಿ ಸಮಾವೇಶವನ್ನು ಹಮ್ಮಿ ಕೊಂಡಿತ್ತು. ಇದನ್ನು ವಿರೋಧಿಸಿ ಕಂಬಳಬೆಟ್ಟು ಜಮಾತ್ ಕಮಿಟಿ ಸ್ಥಳೀಯ ಪಂಚಾಯತ್‌ಗೆ ಮನವಿ ಮಾಡಿದ್ದು, ಅದರಂತೆ ಇದೀಗ ಪಂಚಾಯತ್ ಈ ಸಮಾವೇಶವನ್ನು ರದ್ದುಪಡಿಸಲು ಆಜ್ಞೆ ಮಾಡಿದೆ.

ಕಂಬಳಬೆಟ್ಟು ಮೊಹಿದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿ (ರಿ) ಸಾದತ್ ನಗರ ಕಂಬಳಬೆಟ್ಟು ಇಲ್ಲಿಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರು ಕಂಬಳಬೆಟ್ಟು ಇತರ ಮುಸ್ಲಿಂ ಮುಖಂಡರೊಂದಿಗೆ ಸೇರಿ ಕಂಬಳಬೆಟ್ಟು ಜಮಾತ್ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಸದ್ರಿ ಸಲಫಿ ಸಂಘಟನೆ ಸೇರಿರುವುದಿಲ್ಲ. ಆದರೆ ಬೇರೆ ಊರಿನಿಂದ, ಹೊರಗಿನಿಂದ ಜನರನ್ನು ತಂದು ಗಲಭೆ ಸೃಷ್ಟಿಸುವ ಹುನ್ನಾರ ವಾಗಿದೆ. ಸಲಫಿಗಳು ಉದ್ದೇಶಿತ ಕಲಾಪ ನಡೆಸಿದಲ್ಲಿ ಶಾಂತಿಭಂಗವಾಗುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಅವರು ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿತ್ತು.

ಸಲಫಿ ಮೂಮೆಂಟ್ ಎಂಬ ಸಂಘಟನೆಯು ಧಾರ್ಮಿಕ ಪ್ರವಚನದ ಸೋಗಿನಲ್ಲಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಧಾರ್ಮಿಕ ಭಾವನೆಗಳನ್ನು ಕೆದಕಿ ಮೂಲಭೂತವಾದವನ್ನು ಹುರಿದುಂಬಿಸಿ ಅಶಾಂತಿ ಸೃಷ್ಟಿಸುತ್ತಿರುವ ಸಂಘಟನೆಯಾಗಿದೆ. ಈಗಾಗಲೇ ಇಂತಹ ಗಲಭೆಗಳು ಅಲ್ಲಲ್ಲಿ ನಡೆದ ಉದಾಹರಣೆಗಳಿವೆ. ಆದ್ದರಿಂದ ಇಂತಹ ಘಟನೆಗಳು ನಡೆಯದಂತೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಬಂಟ್ವಾಳ ತಹಶೀಲ್ದಾರರಿಗೆ, ಬಂಟ್ವಾಳ ವೃತ್ತ ನಿರೀಕ್ಷಕರಿಗೆ, ಸ್ಥಳೀಯ ಗ್ರಾ.ಪಂ., ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದರನ್ವಯ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಈ ಸಮಾವೇಶವನ್ನು ರದ್ದುಪಡಿಸಲು ಆಜ್ಞೆ ಹೊರಡಿಸಿದೆ.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನ ಆದೇಶಕ್ಕೆ ಇಲ್ಲಿನ ಸಲಫಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇದೇ ರೀತಿಯ ಸಲಫಿ ಸಮಾವೇಶವು ಇತ್ತೀಚೆಗಷ್ಟೇ ವಿಟ್ಲ ಸಮೀಪದ ಸಾಲೆತ್ತೂರುನಲ್ಲಿ ನಡೆದ ಸಂದರ್ಭ ಉಳ್ಳಾಲ ಧರ್ಮಗುರುಗಳನ್ನು ವೀಡಿಯೋ ಕ್ಲಿಪ್ಪಿಂಗ್ ಮೂಲಕ ಸಲಫಿಗಳು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಇಲ್ಲಿಯ ಸ್ಥಳೀಯ ಎಸ್ಸೆಸ್ಸೆಫ್ ಕಾರ್ಯಕರ್ತರು ಸಮಾವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಮಧ್ಯೆ ಸಲಫಿ ಹಾಗೂ

Advertisements
Posted in: Special Report