ಮಾನ ಕಳೆದುಕೊಳ್ಳಲು ಪ್ರತಿಭಟಿಸುವವರು!

Posted on May 19, 2011

0


ಮಂಗಳೂರು: ದ.ಕ. ಜಿಲ್ಲೆಯ ಕಾಂಗ್ರೆಸ್ ಅಧೋಗತಿ ಮತ್ತೊಮ್ಮೆ ಪ್ರದರ್ಶನವಾಗಿದೆ. ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಾಗೂ ರಸ್ತೆ ತಡೆಗಳು ಕಾಂಗ್ರೆಸ್‌ನ ಸ್ಥಿತಿ ಈಗ ಇಲ್ಲಿ ಹೇಗಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾ ನಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ಶೇ.೧೫ರಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ ಏರಿಸಿರುವುದನ್ನು ವಿರೋಧಿಸಿ ಜಿಲ್ಲಾ ಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿ ಕೆಪಿಟಿ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ನಾಯಕರು ಸಾರ್ವಜನಿಕರ ಮುಂದೆ ತಮ್ಮ ಪಕ್ಷದ ಮಾನವನ್ನು ಹರಾಜಿಗೆ ಹಾಕಿದ್ದಾರೆ. ಇವರಿಗಿಂತ ವಾಟಾಳ್ ನಾಗರಾಜ್ ಪ್ರತಿಭಟನೆ ಎಷ್ಟೋ ವಾಸಿ ಎಂದು ಅವರದೇ ಪಕ್ಷದ ಕಾರ್ಯ ಕರ್ತರು ವಂಗ್ಯವಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಮಹಾಮಹಿಮ ನಾಯ ಕರು ಸೋಮವಾರ ನಡೆಸಿದ ಪ್ರತಿಭಟನೆ ಹಾಗೂ ಮಂಗಳವಾರ ಮಾಡಿದ ರಸ್ತೆ ತಡೆ ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಅದೇ ೨೫ರಿಂದ ೩೦ ನಾಯಕರು. ಇಲ್ಲಿ ಕಾರ್ಯಕರ್ತರ ಸುಳಿವೇ ಇರಲಿಲ್ಲ.

ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರೆ ಇವರ ಪ್ರಹಸನವನ್ನು ನೋಡಲು ಕನಿಷ್ಠ ಮಾರುಕಟ್ಟೆಯಲ್ಲಿ ಓಡಾಡುವ ಹಾಗೂ ಬಸ್‌ನಲ್ಲಿ ಬಂದ ಜನರಾದರೂ ಇರುತ್ತಾರೆ. ಕೆಪಿಟಿ ಜಂಕ್ಷನ್ ನಲ್ಲಿ ಅಂತಹ ಸೌಲಭ್ಯವೂ ಇರಲಿಲ್ಲ. ರಾಷ್ಟ್ರೀಯ ಪಕ್ಷ, ಜಿಲ್ಲೆಯಲ್ಲಿ ನಾಲ್ವರು ಶಾಸಕರನ್ನೂ ಹೊಂದಿ ರುವ ಕಾಂಗ್ರೆಸ್ ನಾಯಕರು ಕರೆ ನೀಡಿರುವ ಪ್ರತಿಭಟನೆ, ಧರಣಿ ಹಾಗೂ ರಸ್ತೆ ತಡೆಗಳಂತಹ ಕಾರ್ಯಕ್ರಮಗಳಲ್ಲಿ ಕನಿಷ್ಠ ನೂರು ಜನ ಸೇರಿ ಸಲು ಸಾಧ್ಯವಿಲ್ಲದ ಸ್ಥಿತಿ ಈಗ ಇದೆ ಎಂದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಭವಿಷ್ಯ ಹೇಗಿರಬಹುದು.

ಹಾಗೆಂದು ಕಾಂಗ್ರೆಸ್ ಪಕ್ಷಕ್ಕೆ ದ.ಕ. ಜಿಲ್ಲೆಯಲ್ಲಿ ಕಾರ್ಯಕರ್ತರು ಇಲ್ಲ ಎಂದೇನೂ ಅರ್ಥವಲ್ಲ. ಕಾಂಗ್ರೆಸ್ ಕಳೆದ ಒಂದು ವರ್ಷದಲ್ಲಿ ಸರಾಗವಾಗಿ ಮೂರು ಮೂರು ಸದಸ್ಯತ್ವ ನೋಂದಣಿ ಅಭಿಯಾನಗಳನ್ನು ನಡೆಸಿದೆ. ಆರಂಭದಲ್ಲಿ ಹಿರಿಯರ

Advertisements
Posted in: Special Report