ಬಸ್-ಕಾರ್ ಡಿಕ್ಕಿ: ಇಬ್ಬರ ಸಾವು

Posted on May 19, 2011

0


ಮಂಗಳೂರು: ಸರಕಾರಿ ಬಸ್ ಮತ್ತು ಕಾರೊಂದರ ನಡುವೆ ಸಂಭವಿ ಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿ ನಲ್ಲಿದ್ದ ಇಬ್ಬರೂ ಪ್ರಯಾಣಿಕರು ಸ್ಥಳ ದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊನ್ನೆ ಬೆಳಿಗ್ಗೆ ಏಳು ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಉದ್ಯಾವ ರದ ನಿವಾಸಿಗಳಾದ ಮೈಯದ್ದಿ (೩೫) ಮತ್ತು ಮೂಸಾ (೩೬) ಎಂಬವರು ಸ್ವಿಫ್ಟ್ ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದರು. ಬೆಳಿಗ್ಗಿನ ಜಾವ ವಾಹನ ಸಂಚಾರ ಕಡಿಮೆ ಇದ್ದ ವೇಗ ವಾಗಿಯೇ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕಲ್ಲಾಪು ಬಳಿ ತಲುಪಿದಾಗ ಎದುರಿನಲ್ಲಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿ ದ್ದಾರೆ.

Advertisements
Posted in: Crime News