ಪ್ರಧಾನಿಯನ್ನೇ ಇಕ್ಕಟ್ಟಿಗೆ ಸಿಲುಕಿಸಿರುವ ರಾಜ ್ಯಪಾಲರ ಬಿಗಿ ನಿಲುವು

Posted on May 19, 2011

0


. ಬೆಂಗಳೂರು:ಸರಕಾರವನ್ನು ವಜಾಗೊಳಿಸಲು ರಾಜ್ಯಪಾಲರು ಹಿಡಿದಿರುವ ಬಿಗು ಪಟ್ಟು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕರ್ನಾಟಕ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರುವ ಶಿಫಾರಸನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕಾರ ಮಾಡಿದ್ದರೂ ರಾಜ್ಯಪಾಲರು ಅದಕ್ಕೆ ಸಮ್ಮತಿಸಿಲ್ಲ. ಕೇಂದ್ರ ಮಂತ್ರಿ ಮಂಡಲವೇ ತಮ್ಮ ಶಿಫಾರಸನ್ನು ಮಾನ್ಯತೆ ಮಾಡಬೇಕು. ಇಲ್ಲವೇ ತಿರಸ್ಕರಿಸಬೇಕು. ಅಲ್ಲಿಯವರೆಗೂ ತಮ್ಮ ನಿರ್ಧಾರದಿಂದ ಬದಲಾವಣೆ ಇಲ್ಲ ಎಂದು ಭಾರದ್ವಾಜ್ ಸ್ಪಷ್ಟಪಡಿಸಿದರು.ಇದರಿಂದ ಸ್ವತಃ ಪ್ರಧಾನಿಯವರೇ ಇಕ್ಕಟ್ಟಿಗೆ ಸಿಲುಕಿದ್ದಾರೆ.

ವಿಧಾನಮಂಡಲ ಅಧಿವೇಶನ ಕರೆಯಲು ಇದೇ ಉದ್ದೇಶದಿಂದ ಅನುಮತಿ ನಿರಾಕರಿಸಿದ್ದಾರೆ. ಸಂಕಷ್ಟದಲ್ಲಿರುವ ಕೇಂದ್ರ ಸರಕಾರ ಇಂದು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿವಾರದಂತೆ ಇಂದು ಮಂತ್ರಿಮಂಡಲದ ಸಭೆ ಜರುಗುತ್ತಿದ್ದು, ಸಭೆಯಲ್ಲಿ ಈ ವಿಷಯ ಅಜೆಂಡಾದಲ್ಲಿಲ್ಲ. ಆದರೆ ಅಂತಿಮವಾಗಿ ಈ ವಿಚಾರವನ್ನು ತೆಗೆದುಕೊಳ್ಳು ತ್ತಾರೊ ಅಥವಾ ಇದೇ ರೀತಿ ವಿಳಂಬ ಧೋರಣೆ ಅನುಸರಿಸುತ್ತಾರೋ ಎಂದು ಕಾದು ನೋಡಲೇಬೇ ಕಾಗುತ್ತದೆ. ಕೇಂದ್ರ ರ್ಧಾರ ಕೈಗೊಳ್ಳುವವರೆಗೂ ರಾಜ್ಯಪಾಲರು ಮಾತ್ರ ಸರಕಾರದ ಯಾವುದೇ ನಿರ್ಧಾರಗಳಿಗೆ ಅನುಮತಿ ರಾಕರಿಸಲಿದ್ದಾರೆ.

Advertisements
Posted in: State News