ಪೆಟ್ರೋಲ್ ಬೆಲೆ ಇಳಿಸಿದ ಕೇರಳ

Posted on May 19, 2011

0


ಕಾಸರಗೋಡು: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಸರ್ಕಾ ರವು ಅಧಿಕಾರಕ್ಕೆ ಬರುತ್ತಿದ್ದಂತೆ ಭಾರೀ ಜನೋಪಯೋಗಿಯಾದ ಎರಡು ಕೊಡುಗೆಗಳನ್ನು ಆರಂಭದ ದಿನದಲ್ಲೇ ಘೋಷಿಸಿದೆ. ಪೆಟ್ರೋಲ್ ದರ ಇಳಿಕೆ ಮತ್ತು ಎಂಡೋಸಲ್ಪಾನ್ ಪೀಡಿತರಿಗೆ ಪರಿಹಾರ ಘೋಷಿಸುವ ಮೂಲಕ ಆರಂಭದಲ್ಲೆ ಜನರಲ್ಲಿ ಭರವಸೆ ಮೂಡಿಸಿದೆ.

ದೇಶಾದ್ಯಂತ ಪೆಟ್ರೋಲ್ ದರದಲ್ಲಿ ಕಳೆದ ಶನಿವಾರದಿಂದ ಭಾರೀ ಏರಿಕೆ ಯಾಗಿತ್ತು. ಈ ಕುರಿತ ಮಹತ್ವದ ಬೆಳವ ಣಿಗೆಯೊಂದರಲ್ಲಿ ಕೇರಳ ರಾಜ್ಯದಲ್ಲಿ ಪೆಟ್ರೋಲ್ ದರ ಇಳಿಕೆಗೆ ತೀರ್ಮಾನಿ ಸಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಇದರಂತೆ ಪೆಟ್ರೋಲ್ ಲೀಟರ್‌ಗೆ ೧.೨೨ರೂ. ಇಳಿಕೆಯಾಗಲಿದೆ. ಹೊಸತಾಗಿ ಅಧಿಕಾರಕ್ಕೇರಿದ ಉಮ್ಮಾನ್ ಚಾಂಡಿ ನೇತೃತ್ವದ ಐಕ್ಯರಂಗ ಸರಕಾರದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಶನಿವಾರದಿಂದ ಕೇರಳದಲ್ಲೂ ಪೆಟ್ರೋಲ್ ದರ ಲೀಟರ್‌ಗೆ ಆರು ರೂ. ಹೆಚ್ಚಳವಾಗಿತ್ತು.

ಪೆಟ್ರೋಲ್ ದರದಲ್ಲಿ ಲಭಿಸುವ ಅಧಿಕ ತೆರಿಗೆಯ ಆದಾಯ ಬೇಡವೆಂದು ಸರ್ಕಾರ ತೀರ್ಮಾನಿಸಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟಾಗುವುದಾದರೂ ಜನತೆಯಲ್ಲಿ

Advertisements
Posted in: Special Report