ಕೋರ್ಟ್ ಆವರಣದಿಂದಮುಸ್ಲಿಂ ಯುವತಿ ಕಿಡ್ನ್ಯಾಪ್!

Posted on May 19, 2011

0


ಮಂಗಳೂರು: ಪ್ರೀತಿಸಿದ ಯುವಕನನ್ನು ಬಿಡಲೊಲ್ಲದೆ ಹೆತ್ತ ವರ ವಿರೋಧ ಕಟ್ಟಿಕೊಂಡಿದ್ದ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅಲ್ಲಿಗೆ ಹಾಜರಾದ ಯುವತಿ ಮನೆಯವರು ಸಾರ್ವಜನಿಕರ ಕಣ್ಮುಂದೆಯೇ ಯುವತಿಯನ್ನು ಹೊತ್ತೊಯ್ದಿದ್ದು ಆಕೆಯನ್ನು ರಕ್ಷಿಸಲು ಮುಂದಾದ ಪ್ರಿಯಕರನನ್ನು ರಸ್ತೆಗೆಸೆದು ಹೋದ ಸಿನಿಮೀಯ ಘಟನೆಯೊಂದು ನಿನ್ನೆ ನಗರದಲ್ಲಿ ನಡೆದಿದೆ.

ಘಟನೆಯ ವಿವರ: ಮೂಲತಃ ಉಳ್ಳಾಲದ ನಿವಾಸಿ (ಪ್ರಸ್ತುತ ಫಳ್ನೀರ್ ನಲ್ಲಿ ವಾಸವಿರುವ) ಹಮೀದ್ ಎಂಬ ವರ ಮಗ ಮನ್ಸೂರ್ ಎಂಬಾತನಿಗೆ ಮೂರುವರೆ ವರ್ಷಗಳ ಹಿಂದೆ ಕಲ್ಲಾಪು ನಿವಾಸಿ ರಝಾಕ್ ಎಂಬವರ ಮಗಳು ಸಭಾಝ್ ಬಾನು ಎಂಬಾಕೆಯ ಪರಿಚ ಯವಾಗಿತ್ತು. ಈ ಪರಿಚಯ ನಂತರ ಪ್ರೇಮಕ್ಕೆ ತಿರುಗಿತ್ತು. ಕಳೆದ ಮೂರುವರೆ ವರ್ಷಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದಷ್ಟು ಮಟ್ಟಿಗೆ ತಲುಪಿತ್ತು ಇವರ ಪ್ರೇಮ. ಒಂದೊಮ್ಮೆ ಉದ್ಯೋಗ ಅರಸಿ ಗಲ್ಫ್‌ಗೆ ಹಾರಿದ್ದ ಮನ್ಸೂರ್ ಸಭಾಝ್‌ಳ ನೆನಪಿನಲ್ಲಿ ಕೊರಗಿ ವಾಪಸ್ ಊರಿಗೆ ಬಂದಿದ್ದ. ಇವರಿಬ್ಬರು ಒಂದೇ ಸಮುದಾಯದವರಾಗಿದ್ದರೂ ಇಲ್ಲಿ ಹೆತ್ತವರ ಅಂತಸ್ತು ಇವರ ಮದುವೆಗೆ ಅಡ್ಡಿಯಾಗಿತ್ತು. ಯುವತಿಯ ಹೆತ್ತವರು ಹಣದ ವಿಚಾರದಲ್ಲಿ ಮೇಲುಗೈ ಹೊಂದಿ ದ್ದರಿಂದ ಇದುವೇ ತಮ್ಮಿಬ್ಬರ ನಡುವೆ ಕಂದಕ ಸೃಷ್ಟಿಸಬಹುದು ಎಂದು ಪ್ರೇಮಿ ಗಳು ಅರಿತಿದ್ದರು.

ಇದರ ಬಗ್ಗೆ ಚಿಂತಿತರಾದ ಪ್ರೇಮಿ ಗಳು ದೃಢ ನಿರ್ಧಾರ ಮಾಡಿ ಕಳೆದ ವಾರ ಮನೆ ಬಿಟ್ಟು ಓಡಿದ್ದರು. ಇದರಿಂದ ಕಂಗಾಲಾಗಿದ್ದ ಯುವತಿಯ ತಂದೆ ಇಬ್ಬರನ್ನೂ ಸಂಪರ್ಕಿಸಿ ಇದು ತಮ್ಮ ಮರ್ಯಾದೆಯ ಪ್ರಶ್ನೆಯಾಗಿದ್ದು ಇಬ್ಬರೂ

Advertisements
Posted in: Special Report