ಕೊಚ್ಚಿ ವಿರುದ್ಧ ೧೧ ರನ್ ಜಯ ಪ್ಲೇ ಆಫ್ ಪ್ರವೇಶಿ ಸಿದ ಚೆನ್ನೈ

Posted on May 19, 2011

0


ಚೆನ್ನೈ: ವೃದ್ಧಿಮಾನ್ ಸಹಾ ಮಧ್ಯಮ ಕ್ರಮಾಂಕದಲ್ಲಿ ಪ್ರದರ್ಶಿಸಿದ ಚೇತರಿಕೆಯ ಆಟದ ನೆರವಿನಿಂದ ಕೊಚ್ಚಿ ಟಸ್ಕರ‍್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ೧೧ ರನ್‌ಗಳ ಜಯ ಸಾದಿಸಿದೆ. ಈ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪ್ರವೇಶಿಸಿ ಫ್ಲೇ ಆಫ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿದೆ.

ಟಾಸ್ ಜಯಿಸಿದ ಚೆನ್ನೈ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡು ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ಕಳೆ ದುಕೊಂಡು ೧೫೨ ರನ್ ಎದುರಾಳಿಗೆ ನಿಗದಿಗೊಳಿಸಿತು. ಬೆನ್ನತ್ತಿದ್ದ ಕೊಚ್ಚಿ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ೧೪೧ ರನ್ ಗಳಿಸಲಷ್ಟೇ ಶಕ್ತವಾಯಿತು.

ನಾಯಕ ಪಾರ್ಥಿವ್ ಪಟೇಲ್ (೬) ವಿಕೆಟ್ ಬೇಗನೇ ಕಳೆದು ಕೊಂಡರೂ ನಂತರ ಗುಣೇಶ್ವರ (೧೯) ಹಾಗೂ ಮೆಕ್‌ಕಲಮ್ ಜೋಡಿ ಎರಡನೇ ವಿಕೆಟ್‌ಗೆ ೩೪ ರನ್ ಕಲೆಹಾಕಿ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು. ಮೆಕ್‌ಕಲಮ್ (೩೩) ನಂತರ ಆಗಮಿಸಿದ ಹಾಡ್ಜ್ ಜೊತೆ ಕೂಡ ೩೮ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾದರು. ಈ ವೇಳೆ ತಂಡ ಮೂರು ವಿಕೆಟ್ ಕಳೆದು ಕೊಂಡು ೮೩ ರನ್ ಗಳಿಸಿತ್ತು. ಉತ್ತಮ ವಾಗಿ ಆಡುತ್ತಿದ್ದ ಜಡೇಜಾ (೧೯) ತನ್ನ ವಿಕೆಟ್ ಕಳೆದುಕೊಂಡಾಗ ತಂಡ ಆಘಾತಕ್ಕೀಡಾಯಿತು. ಅಂತಿಮ ಎರಡು ಓವರ್‌ಗಳಲ್ಲಿ ತಂಡಕ್ಕೆ ಗೆಲ್ಲಲು ೩೮ ರನ್‌ಗಳ ಅಗತ್ಯವಿತ್ತು. ಆದರೆ ಒವೈಸ್ (೩) ಹಾಗೂ ಹಾಗೂ ಹಾಡ್ಜ್ (೫೧) ಜೋಡಿ ೧೯ನೇ ಓವರ್‌ನಲ್ಲಿ ೧೮ ರನ್ ಕಲೆಹಾಕಿದಾಗ ಪಂದ್ಯ ರೋಚ ಕತೆಗೆ ಸಿಲುಕಿತ್ತು. ಹೀಗೆ ಅಂತಿಮ ಆರು ಎಸೆತಗಳಲ್ಲಿ ತಂಡದ ಜಯಕ್ಕೆ ೧೯ ರನ್ ಬೇಕಿದ್ದರೂ ಅದನ್ನು ಗಳಿಸಲು ವಿಫಲ ವಾಗಿ ಸೋಲನ್ನು ಕಂಡಿತು. ಅಶ್ವಿನ್ ಒಂದು ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆ ಸಿದ ಚೆನ್ನೈ ತನ್ನ ಆರಂಭಿಕ ವಿಜಯ್ (೧೬) ವಿಕೆಟ್ ಅನ್ನು ಬೇಗನೇ ಕಳೆದು ಕೊಂಡಿತು. ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ದಾಖ ಲಿಸಿ ಎದುರಾಳಿಗೆ ಅಪಾಯಕಾರಿಯಾ ಗುವ ಲಕ್ಷಣ ತೋರಿದ ರೈನಾ (೧೯) ಕೂಡ ಹೆಚ್ಚು ನಿಲ್ಲಲು ವಿಫಲರಾದರು. ಬದ್ರಿನಾಥ್ ೧೩ ರನ್ ಗಳಿಸಿದರು. ಈ ವೇಳೆ ತಂಡ ಮೂರು ವಿಕೆಟ್ ಕಳೆದು ಕೊಂಡು ೬೦ ರನ್ ಗಳಿಸಿತ್ತು. ಆದರೆ ಹಸ್ಸಿ (೩೨) ಹಾಗೂ ಸಾಹಾ ನಾಲ್ಕನೇ ವಿಕೆಟ್‌ಗೆ ೩೭ ರನ್‌ಗಳನ್ನು ಕಲೆಹಾಕಿ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಧೋನಿ ಕೇವಲ ೯ ರನ್‌ಗೆ ನಿರ್ಗಮಿ ಸಿದಾಗ ತಂಡದ ದೊಡ್ಡ ಮೊತ್ತಕ್ಕೆ ಕಡಿವಾಣ ಬಿದ್ದಂತಾದ ಯಿತು. ಆದರೂ ಮಧ್ಯಮ ಕ್ರಮಾಂಕದಲ್ಲಿ ಸಾಹಾ ೩೩ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಒಂದು ಬೌಂಡರಿಗಳ ನೆರವಿನಿಂದ ಅಜೇಯ ೪೬ ರನ್ ಗಳಿಸಿ ತಂಡದ ಮೊತ್ತವನ್ನು ೧೫೦ರ ಗಡಿ ದಾಟಿಸಲು ನೆರವಾದರು. ಜಡೇಜಾ ಎರಡು ವಿಕೆಟ್ ಪಡೆದರು.

Advertisements
Posted in: Sports News