ಕೈಕುಲುಕಿದ ಭಾರದ್ವಾಜ್-ಯಡಿಯೂರಪ್ಪ

Posted on May 19, 2011

0


ಬೆಂಗಳೂರು: ಐದಾರು ದಿನಗಳಿಂದ ರಾಜ್ಯ ರಾಜಕೀ ಯದಲ್ಲಿ ಭುಗಿಲೆದ್ದಿರುವ ಸ್ಫೋಟದ ನಡುವೆಯೇ ನಿನ್ನೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪ ಸರ್ಕಾರಿ ಕಾರ್ಯಕ್ರಮವೊಂದ ರಲ್ಲಿ ಮುಖಾಮುಖಿಯಾಗುವುದರ ಜತೆಗೆ ಕೈಕುಲುಕಿ ಆತ್ಮೀಯತೆ ಪ್ರದರ್ಶಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದು, ಯಡಿಯೂರಪ್ಪ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ತಮ್ಮ ಶಾಸಕರ ಪರೇಡ್ ನಡೆಸಿದ್ದು ಇದ್ಯಾವುದೂ ನಡೆದೇ ಇಲ್ಲವೆಂಬಂತೆ ಪರಸ್ಪರ ಕುಶಲೋಪರಿ ಹಂಚಿಕೊಂಡರು. ಆದರೆ, ಕೆಲವೇ ಕ್ಷಣಗಳಲ್ಲಿ ಭಾಷಣದ ಸಂದರ್ಭದಲ್ಲಿ ಸಿಕ್ಕ ಅವಕಾಶದಲ್ಲಿ ಇಬ್ಬರೂ ತಮ್ಮ ನಡೆಯನ್ನು ಸಮರ್ಥಿ ಸಿಕೊಳ್ಳುವ ಜತೆಗೆ ಒಬ್ಬರನ್ನೊಬ್ಬರು ಹೊಗಳುವುದು ನಡೆ ಯಿತು.

ಮಂಗಳವಾರವಷ್ಟೇ ರಾಜ್ಯಪಾಲರ ಕ್ರಮ ಬಿಜೆಪಿ ನಾಯಕರನ್ನು ಒಟ್ಟುಗೂಡಿಸಿದೆ. ಇದಕ್ಕಾಗಿ ಅವರಿಗೆ ವಂದನೆ. ವಿಧಾನಸೌಧದಲ್ಲಿ ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದ ಯಡಿಯೂರಪ್ಪ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲು ಕಾರಣವೇನು ಎಂಬುದರ ಸ್ಪಷ್ಟನೆ ನೀಡಿ ಪ್ರತಿಭಟನೆ ಎಂದು ಹಾದಿ ಬೀದಿಗೆ ಇಳಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದ ಭಾರದ್ವಾಜ್ ಅವರು ವೇದಿಕೆಯಲ್ಲಿ ಬಾಯಿ ಬಾಯಿ ಆಗಿದ್ದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ವರಿಗಂತೂ ಈ ಬೆಳವಣಿಗೆಗಳು

Advertisements
Posted in: State News