aನಿವೃತ್ತ ಯೋಧ ಆತ್ಮಹತ್ಯೆ

Posted on May 12, 2011

0


ಪುತ್ತೂರು: ಅನಾರೋಗ್ಯ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಿವೃತ್ತ ಯೋಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಪರ್ಲಡ್ಕದಲ್ಲಿ ನಡೆದಿದೆ.

ಪುತ್ತೂರಿನ ಪರ್ಲಡದ್ಕ ಕಲ್ಲಿಮಾರು ನಿವಾಸಿ, ನಿವೃತ್ತ ಯೋಧ ಫೆಡ್ರಿಕ್ ಮಸ್ಕರೇನಸ್(೫೫) ರವರು ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಫೆಡ್ರಿಕ್‌ರವರು ಕುಡಿತದ ಚಟ ಹೊಂದಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅವರ ಪ್ರಶಾಂತ್ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisements
Posted in: Local News