12 May, 2011 06:55

Posted on May 12, 2011

0


ಉಡುಪಿ: ಇಲ್ಲಿನ ಕುಂಞಿಬೆಟ್ಟುವಿ ನಲ್ಲಿರುವ ಕೆಇಬಿ ಕ್ವಾರ್ಟಸ್ ಬಳಿ ಹಾಡಹಗಲೇ ಎರಡು ಮನೆಗಳಿಂದ ಕಳ್ಳರು ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ನಿನ್ನೆ ನಡೆದಿದೆ.

ಜಯಕರ ನಾಯ್ಕ್ ಮತ್ತು ರಮೇಶ್ ಸುವರ್ಣ ಎಂಬವರ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ೨೩,೦೦೦ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ . ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇದೇ ವಸತಿಗೃಹದ ಬಳಿಯ ಮನೆಗಳಿಂದ ಹಾಡಹಗಲೇ ಸಾವಿರಾರು ರೂ ಮೌಲ್ಯದ ಸೊತ್ತುಗಳ ಕಳವು ನಡೆದಿತ್ತು. ಇದರಲ್ಲಿ ಸ್ಥಳೀಯರ ಕೈವಾಡವಿದೆ ಎಂದು ಕ್ವಾರ್ಟಸ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Posted in: Special Report