ಹಲ್ಲೆ: ಪಾಲಿಕೆ ಸದಸ್ಯನ ವಿರುದ್ಧ ದೂರು

Posted on May 12, 2011

0


ಮಂಗಳೂರು: ಪದವು ಮೇಲ್ತೋಟ ನಿವಾಸಿ ಅನಿಲ್ ಲೋಬೊ (೩೨) ಎಂಬವರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಾಲಿಕೆ ಸದಸ್ಯ ಬಾಸ್ಕರ ಮೊಯಿಲಿ ಸಹಿತ ನಾಲ್ವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೂ ವಿವಾದಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ದೆಮ್ಮಿಲೆ ಮಲ್ಲೂರಿನ ಮಿಂಗಲ್ ಎಂಬವರ ಪುತ್ರ ಅನಿಲ್ ಲೋಬೊ ಪೊಲೀಸ್ ದೂರು ಸಲ್ಲಿಸಿದ್ದಾರೆ. ಮೇ ೯ರಂದು ತಾವು ಪದವು ಮೇಲ್ತೋಟದಲ್ಲಿ ಆವರಣದ ಗೋಡೆ ಕಟ್ಟುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯ ಭಾಸ್ಕರ ಮೊಯಿಲಿ, ಹೆರಿಕ್, ರಿಚಾರ್ಡ್ ನೊರಾನ್ಹಾ, ಡೆನ್ನಿಸ್ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿದರಲ್ಲದೆ ಹಲ್ಲೆ ನಡೆಸಿದರು. ಮಾತ್ರವಲ್ಲದೆ ತನಗೆ ಅವರು ಜೀವ ಬೆದರಿಕೆಯನ್ನೂ ಒಡ್ಡಿದರು ಎಂದು ಅನಿಲ್ ಲೋಬೊ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಅನಿಲ್ ನಗರದ ಇಂದಿರಾ ನರ್ಸಿಂಗ್ ಹೋಂನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲಿನಿಂದ ಬಿದ್ದು ಮೃತ್ಯು

ಉಡುಪಿ: ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಿಂದ ಬೆಳ್ಮಣ್ ಸೂಡ ನಿವಾಸಿ ಸದಾನಂದ ಮೂಲ್ಯ ಎಂಬ ವರು ಪೆರಂಪಳ್ಳಿ ಬಳಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.

ರೈಲಿನಲ್ಲಿ ಕುಳಿತುಕೊಳ್ಳಲು ಸೀಟು ಸಿಗದೇ ಇದ್ದುದರಿಂದ ರೈಲಿನ ಬಾಗಿಲ ಬಳಿ ನಿಂತುಕೊಂಡಿದ್ದ ಇವರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ರೈಲ್ವೆ ಪೊಲೀಸರಲ್ಲಿ ಪ್ರಕರಣ ದಾಖಲಾಗಿದೆ.

Posted in: Local News